ಶಿರಸಿ: ಕಸ್ತೂರಿಬಾ ನಗರದ ಮನೆಯೊಂದರಲ್ಲಿ ಸಂಗ್ರಹಿಸಿಡಲಾಗಿದ್ದ ಕಾಡು ಪ್ರಾಣಿ ಮಾಂಸವನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಸೋಮವಾರ ಮನೆ ಮೇಲೆ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳು ಮಾಂಸವನ್ನು ಪತ್ತೆ ಮಾಡಿದರು. ದಾಳಿಯ ವೇಳೆ ಆರೋಪಿ ಮಹ್ಮದ್ ಸಾದಿಕ್ ಮಹ್ಮದ್ ಇಕ್ಬಾಲ್ ಶೇಖ್ ತಪ್ಪಿಸಿಕೊಂಡಿದ್ದಾನೆ. ಆತನಿಗಾಗಿ ಇದೀಗ ಶೋಧ ಮುಂದುವರೆದಿದೆ.