ಮುoಡಗೋಡ: ಕೊಪ್ಪ ಗ್ರಾಮದ ಇಂದಿರಾನಗರದ ಬಳಿ ಅಂದರ್ ಬಾಹಿರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಸೆ 29ರಂದು ಮಂಜುನಾಥ ತಿಮ್ಮಪ್ಪ ಪಟೋಜಿ ಅವರ ಹೊಲದಲ್ಲಿರುವ ಮನೆ ಅಂಚಿನ ಜಾಗದಲ್ಲಿ ಕೆಲವರು ಜೂಜಾಟದಲ್ಲಿ ನಿರತರಾಗಿದ್ದರು. ಆಗ ಪೊಲೀಸ್ ಉಪನಿರೀಕ್ಷಕ ಪರಶುರಾಮ ಮಿರ್ಜಗಿ ದಾಳಿ ನಡೆಸಿದರು. ಈ ವೇಳೆ ಇಂದಿರಾನಗರದ ಸಂತೋಷ ಅರ್ಜುನ ಭೋವಿ, ಅದೇ ಊರಿನ ಮಂಜುನಾಥ ಶೀನಪ್ಪ ಹರಿಜನ, ವಿರೂಪಾಕ್ಷ ಯಲ್ಲಪ್ಪ ಮುತ್ತಗಿ, ರಾಜು ಹನುಮಂತ ಕೊಂಕರ್, ಮುಕ್ತಾಮಸಾಬ್ ಇನಾಮಸಾಬ್, ಬಸವರಾಜ ಹನುಮಂತ ಕೊಂಕರ್, ಪುಟ್ಟಪ್ಪ ಪಕೀರಪ್ಪ ವಾಲೀಕರ್, ನನ್ನಸಾಬ್ ಗುಡಸಾಬ್ ಡಂಬಳ, ಹನುಮಂತ ತಿಮ್ಮಣ ಬೋವಿ ಹಾಗೂ ಹುಬ್ಬಳ್ಳಿಯ ಸಾಧಿಕ ಜಲಾಲಸಾಬ್ ಸಿಕ್ಕಿ ಬಿದ್ದಿದ್ದಾರೆ. ಇಸ್ಪಿಟ್ ಆಟಕ್ಕೆ ಬಳಸಿದ 4380ರೂ ಹಣ ಸ್ಥಳದಲ್ಲಿದ್ದ ತಾಡಪತ್ರಿ ಹಾಗೂ 52 ಇಸ್ಪಿಟ್ ಎಲೆಗಳನ್ನು ಪೊಲೀಸರು ವಶಕ್ಕೆ ಪಡೆದರು.