ಶಿರಸಿ: ಮತ್ತಿಗಟ್ಟಾದ ಮುಂಡಿಗೆಮನೆ ಬಳಿ `ನಾಟಿಮನೆ ಹೋಟೆಲ್\’ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಗಜಾನನ ಗೋಪಾಲ ಕೆಲಸಿ ಎಂಬಾತರು ಇಲ್ಲಿ ಹೋಟೆಲ್ ನಡೆಸುತ್ತಿದ್ದರು. ಸೆ 30ರಂದು ಪೊಲೀಸ್ ಉಪನಿರೀಕ್ಷಕ ಪ್ರತಾಪ ಪ್ರಕಾಶ ಪಚ್ಚಪ್ಪಗೋಳ ಆ ಹೋಟೆಲ್ ತಪಾಸಣೆ ನಡೆಸಿದರು. ಆಗ ಅಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಸರಾಯಿ ಸಿಕ್ಕಿದ್ದು, ಹೋಟೆಲಿಗೆ ಆಗಮಿಸುವವರಿಗೆ ಹೋಟೆಲ್ ಮುಂದೆಯೇ ಮದ್ಯ ಸೇವನೆಗೂ ಅವಕಾಶ ನೀಡಿರುವುದು ಕಾಣಿಸಿತು. ಆದರೆ, ಮದ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ನೀಡಲು ಗಜಾನನ ಕೆಲಸಿ ಅವರ ಬಳಿ ಯಾವುದೇ ಅಧಿಕೃತ ಪರವಾನಿಗೆ ಇರಲಿಲ್ಲ. ಹೀಗಾಗಿ ಅಲ್ಲಿದ್ದ ವಿಸ್ಕಿ ಪ್ಯಾಕೇಟ್ ಸೇರಿ ವಿವಿಧ ಸಾಮಗ್ರಿಗಳನ್ನು ಪೊಲೀಸರು ಜಪ್ತಿ ಮಾಡಿದರು. ಜೊತೆಗೆ ಅಕ್ರಮ ಮದ್ಯ ಸೇವನೆಗೆ ಅವಕಾಶ ಕೊಟ್ಟ ಹಿನ್ನಲೆ ಪ್ರಕರಣವನ್ನು ದಾಖಲಿಸಿದರು.