ಹೊನ್ನಾವರ: ಬೆರೂಳ್ಳಿ ಹೊಳೆಬೆದಿಕೇರಿ ಮೂಲದ ಬೋಟು ಕಾರ್ಮಿಕ ಜಗದೀಶ ಅಮಕೂಸು ಗೌಡ (25) ನಾಯಿಗೆ ಬೆದರಿ ಬಿದ್ದು ಗಾಯಗೊಂಡಿದ್ದಾರೆ.
ಸೆ 30ರಂದು ಹೊನ್ನಾವರದ ಚರ್ಚ ಬಳಿಯ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಅವರು ಬೈಕಿನಲ್ಲಿ ಹೋಗುತ್ತಿದ್ದರು. ಹೈವೆಯಿಂದ ತಾರಿಬಾಗಿಲು ಕಡೆ ಹೋಗುವಾಗ ಎದುರಿಗೆ ನಾಯಿ ಬಂದಿದ್ದು, ಹೆದರಿದ ಅವರು ಬೈಕನ್ನು ಅಂಚಿಗೆ ತೆಗೆದುಕೊಂಡರು. ಆಗ ನಿಯಂತ್ರಣ ತಪ್ಪಿ ಬೈಕ್ಸಹಿತ ನೆಲಕ್ಕೆ ಬಿದ್ದು ಗಾಯಗೊಂಡರು. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.