ಶಿರಸಿ: ಎಸಳೆ ಗ್ರಾಮದ ಕೆರೆಗೆ ಕಾಲು ತೊಳೆಯಲು ಹೋಗಿದ್ದ ಹನುಮಂತಪ್ಪ ಫಕೀರಪ್ಪಾ ತುಕೋಜಿ (63) ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ.
ದೊಡ್ನಳ್ಳಿ ರಸ್ತೆ ಎಸಳೆ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿ ಬದುಕುತ್ತಿದ್ದ ಅವರು ಸೆ 29ರ ರಾತ್ರಿ ಕೆರೆ ಬಳಿ ಹೋಗಿದ್ದರು. ಕಾಲು ತೊಳೆಯುವುದಕ್ಕಾಗಿ ಅವರು ನೀರಿಗೆ ಇಳಿದಿದ್ದರು. ಅಲ್ಲಿಂದ ಮುಂದೆ ಕಾಲು ಜಾರಿ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ.
ಸಮುದ್ರಕ್ಕೆ ಬಿದ್ದ ಮೀನು ಕಾರ್ಮಿಕ ಸಾವು
ಅಂಕೋಲಾ: ಬೇಲಿಕೇರಿ ಬಂದರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸೂರಜ ಕಾರ್ತಿಕ ನಾಯ್ಕ ಎಂಬಾತ ಅರಬ್ಬಿ ಸಮುದ್ರದಲ್ಲಿ ಮುಳುಗಿ ಸಾವನಪ್ಪಿದ್ದಾನೆ. ಓಡಿಸ್ಸಾ ಸುಂದರಘಡದ ಸೂರಜ್ ಕೃಷ್ಣಾ ಭಾನಾವಳಿಕರ್ ಅವರ ಕಿಂಗ್ ಫಿಶ್ ಬೋಟಿನಲ್ಲಿ ಈತ ಕೆಲಸಕ್ಕಿದ್ದ. ಸೆ 29ರಂದು ರಾತ್ರಿ ಮೀನುಗಾರಿಕೆ ಮುಗಿಸಿದ ನಂತರ ಬೋಟಿನ ಹಗ್ಗವನ್ನು ಧಕ್ಕೆಗೆ ತರಲು ಹೋಗಿದ್ದ. ಆಗ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದು, ಎಷ್ಟು ಹುಡುಕಿದರೂ ಸಿಕ್ಕಿರಲಿಲ್ಲ. ಸೆ 30ರಂದು ಆತನ ಶವ ಸಿಕ್ಕಿದೆ.