ಅಂಕೋಲಾ: ಅಮದಳ್ಳಿಗೆ ಹೋಗಬೇಕಿದ್ದ ನಿವೇದಿತಾ ಪಾಂಡುರoಗ ನಾಯ್ಕ (45) ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದಾರೆ.
ಅಮದಳ್ಳಿಯ ಅವರು ಸೆ 1ರಂದು ಸಂಜೆ ಅಂಕೋಲಾ ಬಸ್ಸು ನಿಲ್ದಾಣದಲ್ಲಿ ಕಾಯುತ್ತಿದ್ದರು. ಆಗ ಅಲ್ಲಿ ಬಂದ ಬಸ್ಸನ್ನು ಅವರು ಏರಿದ್ದು ಬಸ್ಸು ಸ್ವಲ್ಪ ದೂರ ಕ್ರಮಿಸಿದ ಮೇಲೆ ಅಮದಳ್ಳಿಯ ಟಿಕೆಟ್ ಕೇಳಿದರು. ಆಗ ಬಸ್ಸಿನ ನಿರ್ವಾಹಕರು `ಈ ಬಸ್ಸು ಕಾರವಾರ ಕಡೆ ಹೋಗುವುದಿಲ್ಲ\’ ಎಂದು ಉತ್ತರಿಸಿದ್ದಾರೆ.
ಇದರಿಂದ ಗಲಿಬಿಲಿಗೊಂಡ ನಿವೇದಿತಾ ಅವರು ಬಸ್ಸಿನಿಂದ ಇಳಿಯುವುದಾಗಿ ತಿಳಿಸಿ ಇಳಿಯಲು ಪ್ರಯತ್ನಿಸಿದ್ದು, ಆಗ ಬಸ್ಸು ಚಾಲಕ ಪುಂಡಲಿಕ ರಾಥೋಡ್ ಬಸ್ಸಿನ ವೇಗ ಹೆಚ್ಚಿಸಿದ್ದರಿಂದ ಅವರು ನೆಲಕ್ಕೆ ಬಿದ್ದು ಗಾಯಗೊಂಡಿದ್ದಾರೆ.