ಕಾರವಾರ: ಬೈತಖೋಲ್ ಬಂದರಿನಲ್ಲಿ ಮಲಗಿದ್ದ ಕಾರ್ಮಿಕ ಹನುಮಂತ ವಡ್ಡರ್ (27) ಎಂಬಾತನ ಮೇಲೆ ಮೀನು ಲಾರಿ ಹತ್ತಿದ್ದು, ಆತ ಅಲ್ಲಿಯೇ ಸಾವನಪ್ಪಿದ್ದಾರೆ.
ಹಾವೇರಿ ಜಿಲ್ಲೆಯ ಹನುಮಂತ ವಡ್ಡರ್ ಅವರು ಮೀನು ಕಾರ್ಮಿಕರಾಗಿ ದುಡಿಯುತ್ತಿದ್ದರು. ಗುರುವಾರ ಕೆಲಸ ಮುಗಿಸಿ ಬಂದು ಆಯಾಸಗೊಂಡಿದ್ದ ಅವರು ಬಂದರಿನಲ್ಲಿ ವಿಶ್ರಮಿಸುತ್ತಿದ್ದರು. ಆಗ ಅದೇ ಮಾರ್ಗವಾಗಿ ಬಂದರಿನಿoದ ಹೊರಗೆ ಹೋಗುತ್ತಿದ್ದ ಮೀನು ಲಾರಿ ಮಲಗಿದ್ದ ಕಾರ್ಮಿಕನ ಮೈಮೇಲೆ ಹತ್ತಿದ್ದು, ಹನುಮಂತ ವಡ್ಡರ್ ನಿದ್ದೆಗಣ್ಣಿನಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ಹನುಮಂತ ವಡ್ಡರ್ ನಿಶ್ಚಿತಾರ್ಥ ಸಹ ನಡೆದಿದ್ದು, ನವೆಂಬರ್ ತಿಂಗಳಿನಲ್ಲಿ ಅವರು ಸಪ್ತಪದಿ ತುಳಿಯಬೇಕಿತ್ತು. ಅದಕ್ಕೂ ಮುನ್ನವೇ ಅವರು ಈ ಲೋಕದ ಯಾತ್ರೆ ಮುಗಿಸಿದರು.