ಕಾರವಾರ: `ಶಾಂತಿ ಹಾಗೂ ಅಹಿಂಸೆಯ ಬಗ್ಗೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದು, ಅವರ ಸೇವೆಯನ್ನು ಸದಾ ಸ್ಮರಿಸಬೇಕು\’ ಎಂದು ನಗೆ ಶಾಲೆಯ ಮುಖ್ಯ ಶಿಕ್ಷಕ ಅಖ್ತರ ಸೈಯದ್ ಹೇಳಿದರು.
ಮಹಾತ್ಮಾ ಗಾಂಧೀಜಿಯವರ 155 ನೇ ಹಾಗೂ ಲಾಲ್ಬಹದ್ದೂರ್ ಶಾಸ್ತಿçà ಅವರ 120 ನೇ ಜನ್ಮ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಅರಿವು ಮೂಡಿಸಿದ ಅವರು `ಸತ್ಯಮೇವ ಜಯತೆ ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ತಮ್ಮ ಜೀವತದ ಅವಧಿಯ ಕೊನೆಯವರೆಗೂ ಅವರು ಅದನ್ನು ಪಾಲಿಸಿಕೊಂಡು ಬಂದಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸಹ ದೇಶದ ಪ್ರಧಾನ ಮಂತ್ರಿಯಾಗಿ ಭಾರತದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ\’ ಎಂದು ವಿವರಿಸಿದರು.
ಸಹಶಿಕ್ಷಕಿ ರೂಪಾ ಉಮೇಶ ನಾಯ್ಕ ಮಾತನಾಡಿ `ಮಹಾತ್ಮ ಗಾಂಧಿಯವರು ಅಹಿಂಸೆಯಿoದ ಸತ್ಯ ಜಯಗಳಿಸುತ್ತದೆ. ಸತ್ಯವೇ ದೇವರು ಎಂದು ಕಲಿಸಿಕೊಟ್ಟಿದ್ದರೆ. ಸತ್ಯ ಶೋಧನೆಗಾಗಿ ಅವರ ಸಾಧನೆಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ\’ ಎಂದು ಕರೆ ನೀಡಿದರು. ಶಾಲಾ ಮಂತ್ರಿ ಮಂಡಲದ ಮುಖ್ಯಮಂತ್ರಿ ಭಾಗ್ಯಶ್ರೀ ಗೌಡ, ಸುಮಂತ ಗೌಡ ದೀಪ ಬೆಳಗಿಸಿದರು. ಅಲ್ಲಿದ್ದ ಮಕ್ಕಳೆಲ್ಲರೂ ಸೇರಿ ಭಜನೆ ಮಾಡಿದರು. ಅತಿಥಿ ಶಿಕ್ಷಕಿ ಪ್ರಿಯಾ ಲಾಂಜೇಕರ ಮತ್ತು ರೇಷ್ಮಾ ಇದ್ದರು. ಈ ವೇಳೆ ಶ್ರಮದಾನ ನಡೆದಿದ್ದು, ಎಲ್ಲರೂ ಸೇರಿ ರಸ್ತೆ ಅಂಚಿನಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಸ್ವಚ್ಛಗೊಳಿಸಿದರು.