ನವೆಂಬರ್ 1ರಿಂದ ಸಾಂಸ್ಕೃತಿಕ ಕಲರವ: ಯಲ್ಲಾಪುರದಲ್ಲಿ ಸಂಕಲ್ಪ ಉತ್ಸವ.. ಸಂಸ್ಕೃತಿಯ ಸುಗ್ಗಿ!

ನವೆಂಬರ್ 1ರಿಂದ ನಾಲ್ಕು ದಿನಗಳ ಕಾಲ ಸಂಕಲ್ಪ ಉತ್ಸವ ನಡೆಯಲಿದೆ. ಸಂಕಲ್ಪ ಉತ್ಸವದ ಭಾಗವಾಗಿ ಡಿಸೆಂಬರ್ 2ನೇ ವಾರ ಯಲ್ಲಾಪುರದಲ್ಲಿ ನಾಟಕೋತ್ಸವವನ್ನು ಸಹ ಸಂಘಟಿಸಲಾಗಿದೆ. ಸೆ 4ರಂದು ಸಂಕಲ್ಪ ಉತ್ಸವದಲ್ಲಿ ಚಿಗುರು ತಂಡದಿoದ ನಡೆಯುವ ಕಾರ್ಯಕ್ರಮಗಳು ಈ ಬಾರಿ ಉತ್ಸವದ ವಿಶೇಷಗಳಲ್ಲಿ ಒಂದು. ಪ್ರತಿ ದಿನ ಸಭಾ ಕಾರ್ಯಕ್ರಮಕ್ಕೂ ಮುನ್ನ ಗೀತಾ ಪಾರಾಯಣ ಪಠಣವೂ ಇರಲಿದೆ.

ಯಲ್ಲಾಪುರ: 37 ವರ್ಷಗಳಿಂದ ಯಲ್ಲಾಪುರದಲ್ಲಿ ಯಕ್ಷಗಾನ ಸಂಘಟಿಸುತ್ತ ಬಂದಿರುವ ಸಾಂಸ್ಕೃತಿಕ ರಾಯಬಾರಿ ಪ್ರಮೋದ ಹೆಗಡೆ 38ನೇ ವರ್ಷದ ಸಂಕಲ್ಪ ಉತ್ಸವಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಪ್ರಮೋದ ಹೆಗಡೆ ಅವರ ಪುತ್ರರಾದ ಪ್ರಸಾದ ಹೆಗಡೆ ಹಾಗೂ ಪ್ರಶಾಂತ ಹೆಗಡೆ ಮುಂದಾಳತ್ವದಲ್ಲಿ ನಾಲ್ಕು ದಿನಗಳ ಕಾಲ ಈ ಉತ್ಸವ ನಡೆಯಲಿದೆ.\"\"

ನವೆಂಬರ್ 1ರಿಂದ 4ರವರೆಗೆ ಪ್ರತಿ ದಿನ ಸಂಜೆ 4.30ರಿಂದ ಸಂಕಲ್ಪ ಉತ್ಸವದ ಕಾರ್ಯಕ್ರಮಗಳು ಶುರುವಾಗಲಿದೆ. ಯಕ್ಷಗಾನ ಪ್ರದರ್ಶನದ ಜೊತೆ ಇನ್ನೂ ಅನೇಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಈ ವೇದಿಕೆ ಸಾಕ್ಷಿಯಾಗಲಿದೆ. `ನ. 1ರ ಸಂಜೆ ಸ್ವರ್ಣವಲ್ಲೀ ಶ್ರೀಗಳು ಉತ್ಸವ ಉದ್ಘಾಟಿಸಲಿದ್ದಾರೆ. ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳ 15 ಜನರಿಗೆ ಈ ಬಾರಿ ಸಂಕಲ್ಪ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ\’ ಎಂದು ಪ್ರಮೋದ ಹೆಗಡೆ ಸುದ್ದಿಗಾರರಿಗೆ ತಿಳಿಸಿದರು. `ಯುನಸ್ಕೋ ಮಾನ್ಯತೆ ಕೆರೆಮನೆ ಮೇಳದ ಮೂಲಕ ಯಕ್ಷಗಾನಕ್ಕೆ ದೊರೆತಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ಗುರುತಿಸಿಕೊಳ್ಳುವಂತೆ ಮಾಡಿದೆ\’ ಎಂದವರು ಈ ವೇಳೆ ಸಂತಸ ಹಂಚಿಕೊoಡರು.

ಸಂಕಲ್ಪ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಮಾತನಾಡಿ `ಸಂಕಲ್ಪ ಉತ್ಸವದ ನಾಲ್ಕು ದಿನಗಳ ಕಾಲ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ, ತಾಳಮದ್ದಲೆ, ಭಜನೆ, ಭಕ್ತಿ ಸಂಗೀತ, ನೃತ್ಯ ರೂಪಕ, ಕೀರ್ತನೆ, ಭರತನಾಟ್ಯ ನಡೆಯಲಿದೆ. ನ 4ರಂದು ಆಯುರ್ವೇದ ಚಿಕಿತ್ಸಾ ಶಿಬಿರ ನಡೆಯಲಿದೆ\’ ಎಂದು ಮಾಹಿತಿ ನೀಡಿದರು. ಅರ್ಥಧಾರಿ ಎಂ.ಎನ್.ಹೆಗಡೆ ಮಾತನಾಡಿ `ಸಂಕಲ್ಪ ಉತ್ಸವ ಜನರ ಉತ್ಸವವಾಗಿ ಮುನ್ನಡೆಯುತ್ತಿದೆ. ಪ್ರತಿ ವರ್ಷ ಉತ್ಸವಕ್ಕಾಗಿ ಜನರು ಕಾಯುತ್ತಿದ್ದಾರೆ\’ ಎಂದರು.

ಸoಸ್ಥೆಯ ಪ್ರಮುಖರಾದ ಪ್ರಶಾಂತ ಹೆಗಡೆ, ರವಿ ಭಟ್ಟ ಬಿಡಾರ, ಗೋಪಣ್ಣ ತಾರೀಮಕ್ಕಿ, ನಾರಾಯಣ ಭಟ್ಟ, ಲೋಕನಾಥ ಗಾಂವ್ಕರ, ಪ್ರದೀಪ ಯಲ್ಲಾಪುರಕರ್ ಉಪಸ್ಥಿತರಿದ್ದರು.

  • Sanjay Patil

    Related Posts

    ಈ ಊರಿಗೆ ಸೇತುವೆ ಇದ್ದರೂ ರಸ್ತೆ ಇಲ್ಲ: ಕಾಳಿ ನದಿಯಲ್ಲಿ ಶವ ಸಾಗಿಸಿ ಅಂತ್ಯ ಸಂಸ್ಕಾರ!

    ಕಾರವಾರ: ಉಮಳೆಜೂಗ ದ್ವೀಪದ ಜನರಿಗೆ ಸರ್ಕಾರ ಸೇತುವೆ ನಿರ್ಮಿಸಿದೆ. ಆದರೆ, ಖಾಸಗಿಯವರ ಅಡ್ಡಗಾಲಿನಿಂದ ಆ ಊರಿಗೆ ರಸ್ತೆ ನಿರ್ಮಾಣವಾಗಿಲ್ಲ. ಹೀಗಾಗಿ ದ್ವೀಪದ ಜನ ನಿತ್ಯ ಪರದಾಡುತ್ತಿದ್ದು, ಗುರುವಾರ ದೋಣಿ ಮೂಲಕ ಸ್ಮಶಾನಕ್ಕೆ ಶವ ಸಾಗಿಸಿದರು! 45 ಎಕರೆ ಪ್ರದೇಶದ ಉಮಳೆಜೂಗದಲ್ಲಿ 30ಕ್ಕೂ…

    ಭಕ್ತಿ ಸಂಗೀತ: ಗೆಜ್ಜೆ ಸದ್ದಿನಲ್ಲಿ ಹೆಜ್ಜೆ ಹಾಕಿದ ಶಾಸಕ!

    ಹಳಿಯಾಳ: ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ತಮ್ಮ 77 ವರ್ಷದ ವಯಸ್ಸು ಮರೆತು ಕುಣಿದು ಕುಪ್ಪಳಿಸಿದರು. ಕೈಯಲ್ಲಿ ಎರಡು ಕೋಲು ಹಿಡಿದು ಅವರು ಕೋಲಾಟ ನಡೆಸಿದರು. ಗುರುವಾರ ರಾತ್ರಿ ಆರಾಧ್ಯದೈವ ತುಳಿಜಾಭವಾನಿ ದರ್ಶನ ಪಡೆದ ಅವರು ಗಂಟೆಗಳ…

    You Missed

    ಜೋಯಿಡಾ ಗಾವಡೆವಾಡಾದ ಖಾಪ್ರಿ ಜಾತ್ರೆ ಯಶಸ್ವಿ ಸಂಪನ್ನ.

    ಜೋಯಿಡಾ ಗಾವಡೆವಾಡಾದ ಖಾಪ್ರಿ ಜಾತ್ರೆ ಯಶಸ್ವಿ ಸಂಪನ್ನ.

    ವರ್ಗಾವಣೆಗೊಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಅವರಿಗೆ ಅದ್ದೂರಿ ಬೀಳ್ಕೊಡುಗೆ.

    ವರ್ಗಾವಣೆಗೊಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಅವರಿಗೆ ಅದ್ದೂರಿ ಬೀಳ್ಕೊಡುಗೆ.

    ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು.

    ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು.

    ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ.

    ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ.

    ಜಿಂಕೆಯ ಬೇಟೆ, ಓರ್ವನ ಬಂಧನ.

    ಜಿಂಕೆಯ ಬೇಟೆ, ಓರ್ವನ ಬಂಧನ.

    ಸಿಡಿಲು ಬಡಿದು ನಾಲ್ವರು ಗಂಭೀರ

    ಸಿಡಿಲು ಬಡಿದು ನಾಲ್ವರು ಗಂಭೀರ

    You cannot copy content of this page