ಕುಮಟಾ: ಗೋಕರ್ಣದ ರಾಮತೀರ್ಥ ಕಡಲತೀರದಲ್ಲಿ ಹನೆಹಳ್ಳಿಯ ವಿಶಾಲ ಶೆಟ್ಟಿ (38) ಎಂಬಾತರ ಶವ ಸಿಕ್ಕಿದೆ.
ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ವಿಶಾಲ ದತ್ತಾ ಶೆಟ್ಟಿ ಎಲ್ಲೆಂದರಲ್ಲಿ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲಾಗದೇ ಆತ ಗುಡ್ಡದಿಂದ ಸಮುದ್ರಕ್ಕೆ ಹಾರಿ ಸಾವನಪ್ಪಿದ ಬಗ್ಗೆ ಕುಟುಂಬದವರು ಹೇಳಿದ್ದಾರೆ.
ಸೆ 3ರಂದು ಬೆಳಗ್ಗೆ ಗೋಕರ್ಣಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಆತ ರಾತ್ರಿ ಆದರೂ ಮನೆಗೆ ಬಂದಿರಲಿಲ್ಲ. ಸೆ 4ರ ಬೆಳಗ್ಗೆ ರಾಮತೀರ್ಥ ಕಡಲತೀರದಲ್ಲಿ ಶವ ಸಿಕ್ಕಿದ್ದು, ವ್ಯಕ್ತಿ ಧರಿಸಿದ ಪ್ಯಾಟಿನ ಜೇಬಿನಲ್ಲಿದ್ದ ದಾಖಲೆ ಪರಿಶೀಲಿಸಿದಾಗ ವಿಶಾಲ ಶೆಟ್ಟಿ ಸಾವನಪ್ಪಿರುವ ಬಗ್ಗೆ ಖಚಿತವಾಗಿದೆ.
ವಿಶಾಲ ಶೆಟ್ಟಿಯ ಪರ್ಸಿನಲ್ಲಿ `ನನ್ನ ಸಾವಿಗೆ ಸಾಲವೇ ಕಾರಣ ಬೇರಾರೂ ಅಲ್ಲ ಸಾಲವೇ ಕಾರಣ\’ ಎಂದು ಬರೆದ ಚೀಟಿಯೂ ಸಿಕ್ಕಿದೆ. ಸಮುದ್ರದ ನೀರಿನಲ್ಲಿ ಚೀಟಿ ಒದ್ದೆಯಾಗಿದ್ದರೂ ಕುಟುಂಬದವರು ಅದು ಆತನೇ ಬರೆದ ಬರಹ ಎಂದು ಖಚಿತಪಡಿಸಿದ್ದಾರೆ.