ಕುಮಟಾ: ಬೈಕಿಗೆ ಕಾರು ಹಿಂದಿನಿoದ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ವಿಷ್ಣು ದೇವು ಮುಕ್ರಿ (52) ಸಾವನಪ್ಪಿದ್ದಾರೆ.
ವಿವೇಕನಗರದ ನಿವಾಸಿ ವಿಷ್ಣು ಮುಕ್ತಿ ಭಾರತೀಯ ವಿಜ್ಞಾನ ಕೇಂದ್ರದಲ್ಲಿ ದಿನಗೂಲಿ ನೌಕರರಾಗಿದ್ದರು. ಗುರುವಾರ ರಾತ್ರಿ 9.45ರ ಸುಮಾರಿಗೆ ಹೆಗಡೆ ರಸ್ತೆಯಲ್ಲಿರುವ ಡಾ ಬಾಳಿಗಾ ಕಾಲೇಜು ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಅವರು ಗಾಯಗೊಂಡಿದ್ದರು. ಪ್ರಜ್ಞಾಹೀನ ಸ್ಥಿತಿ ತಲುಪಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನ ಆಗಲಿಲ್ಲ.
ಕಾರು ಚಲಾಯಿಸುತ್ತಿದ್ದ ಹೆಗಡೆ ಮೇಲಿನಕೇರಿಯ ರಜತ್ ಗೋಪಾಲ ಪಟಗಾರ (23) ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.