ಜೊಯಿಡಾ: ದನ ಮೇಯಿಸಲು ಕಾಡಿಗೆ ಹೋಗಿದ್ದ ಪ್ರವೀಣ ಮಿರಾಶಿ (25) ಎಂಬಾತ ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ವರಂಡಾ ಗ್ರಾಮದ ಪ್ರವೀಣ ಪ್ರವೀಣ ಪ್ರಕಾಶ ಮಿರಾಶಿ ಹೊಟ್ಟೆನೋವಿನಿಂದ ಬಳಲುತ್ತಿದ್ದ. ವಿವಿಧ ಆಸ್ಪತ್ರೆಗೆ ಕರೆದೊಯ್ದು ಆತನಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಹೊಟ್ಟೆ ನೋವು ಕಡಿಮೆ ಆದ ಬಗ್ಗೆ ಆತ ಹೇಳಿಕೊಂಡಿದ್ದ. ಹೀಗಿರುವಾಗ ಮೂರು ದಿನದ ಹಿಂದೆ ಆತನಿಗೆ ಜ್ವರ ಬಂದಿದ್ದು, ಜಗಲಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ.
ಅದಾದ ನಂತರ ಅಕ್ಟೋಬರ್ 3ರಂದು ಮಧ್ಯಾಹ್ನ ಊಟ ಮಾಡಿದ ಆತ ಗದ್ದೆಗೆ ದನ ಬಿಟ್ಟುಕೊಂಡು ಹೋಗಿದ್ದ. ಮೇವಿಗೆ ಹೋದ ಎಲ್ಲಾ ಜಾನುವಾರುಗಳು ಸಂಜೆ ಕೊಟ್ಟಿಗೆಗೆ ಮರಳಿದರೂ ಪ್ರವೀಣ ಮಾತ್ರ ಮನೆಗೆ ಬಂದಿರಲಿಲ್ಲ. ಹೀಗಾಗಿ ಆತನ ತಂದೆ ಪ್ರಕಾಶ ಮಿರಾಶಿ ಎಲ್ಲಾ ಕಡೆ ಹುಡುಕಾಡಿದ್ದರು. ಊರಿನ ಅರಣ್ಯ ಹಾಗೂ ಗದ್ದೆಯಲ್ಲಿ ಹುಡುಕಿದರೂ ಪ್ರವೀಣನ ಸುಳಿವು ಸಿಕ್ಕಿರಲಿಲ್ಲ.
ಸಂಬoಧಿಕರಲ್ಲಿ ವಿಚಾರಿಸಿದಾಗಲೂ ಯಾವುದೇ ಮಾಹಿತಿ ಇರಲಿಲ್ಲ. ವರಂಡಾ ಗ್ರಾಮದ 2ಕಿಮೀ ದೂರದಲ್ಲಿ ಪ್ರವೀಣನ ಶವ ಶುಕ್ರವಾರ ಸಿಕ್ಕಿದೆ. ಮತ್ತಿಗಿಡಕ್ಕೆ ನೇಣು ಹಾಕಿಕೊಂಡು ಆತ ಸಾವನಪ್ಪಿದ್ದು, ಎರಡು ಕಾಲುಗಳಿಗೆ ಇರುವೆ ಮುತ್ತಿಕೊಂಡಿದ್ದವು. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ನೀಡಿ, ನಂತರ ಕುಟುಂಬದವರಿಗೆ ಹಸ್ತಾಂತರಿಸಿದರು.