ಸರ್ಕಾರಿ ಅಕ್ಕಿ ಕಳ್ಳರ ಪಾಲು!

ಹಳಿಯಾಳ: ಯಲ್ಲಾಪುರ ನಾಕೆ ಬಳಿ ವ್ಯಾಪಾರ ಮಳಿಗೆ ನಡೆಸುತ್ತಿರುವ ಅಬ್ಬಾಸ ಅಲಿ ಗೌಸ್ ಮೋಹಿದ್ದೀನ್ ಪಟೇಲ್\’ನ ಮಳಿಗೆಯಲ್ಲಿ ಸರ್ಕಾರಿ ಅಕ್ಕಿ ಅಕ್ರಮ ದಾಸ್ತಾನು ಇರುವುದನ್ನು ಆಹಾರ ನಿರೀಕ್ಷಕ ಸಂತೋಷ ಶಿವಾಜಿ ತೊಂಡಲೆ ಪತ್ತೆ ಮಾಡಿದ್ದಾರೆ.

ಜೋಗಿನಕೊಪ್ಪದ ಅಬ್ಬಾಸ್ ಅಲಿ ಮಾರುತಿ ಗಲ್ಲಿಯ ಜಂ ಜಂ ಜ್ಯೂಸ್ ಸೆಂಟರ್ ಬಳಿ ವ್ಯಾಪಾರ ಮಳಿಗೆಯನ್ನು ಹೊಂದಿದ್ದ. ಬಡ ಜನರಿಗೆ ಸರ್ಕಾರದಿಂದ ವಿತರಿಸುವ ಅಕ್ಕಿಯನ್ನು ಈತ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ. ಬಡ ಜನರಿಗೆ ಆಮೀಷ ಒಡ್ಡಿ ಅಕ್ಕಿ ಖರೀದಿಸುವುದರ ಜೊತೆ ಪಡಿತರ ಅಂಗಡಿಗಳಿAದಲೂ ಆತ ಅದನ್ನು ಸಂಗ್ರಹಿಸುತ್ತಿದ್ದ. ದುಬಾರಿ ಬೆಲೆಗೆ ಈ ಅಕ್ಕಿ ಮಾರಾಟ ಮಾಡಿ ಹಣಗಳಿಸಿದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದರು.

ಈ ಹಿನ್ನಲೆ ಅಂಗಡಿ ಮೇಲೆ ಆಹಾರ ಅಧಿಕಾರಿಗಳು ದಾಳಿ ನಡೆಸಿದರು. ಆಗ ಅಲ್ಲಿ 1788 ಕೆಜಿ ಸರ್ಕಾರಿ ಅಕ್ಕಿ ಸಿಕ್ಕಿದೆ. ಇದಕ್ಕೆ ಸಂಬAಧಿಸಿದ ಯಾವುದೇ ಕಾಗದ-ಪತ್ರಗಳು ವ್ಯಾಪಾರಿ ಬಳಿ ಇರಲಿಲ್ಲ. 50 ಸಾವಿರ ರೂ ಮೌಲ್ಯದ ಸರ್ಕಾರಿ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಹಿನ್ನಲೆ ಆತನ ವಿರುದ್ಧ ಪೊಲೀಸ್ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

 

 

  • Sanjay Patil

    Related Posts

    ಈ ಊರಿಗೆ ಸೇತುವೆ ಇದ್ದರೂ ರಸ್ತೆ ಇಲ್ಲ: ಕಾಳಿ ನದಿಯಲ್ಲಿ ಶವ ಸಾಗಿಸಿ ಅಂತ್ಯ ಸಂಸ್ಕಾರ!

    ಕಾರವಾರ: ಉಮಳೆಜೂಗ ದ್ವೀಪದ ಜನರಿಗೆ ಸರ್ಕಾರ ಸೇತುವೆ ನಿರ್ಮಿಸಿದೆ. ಆದರೆ, ಖಾಸಗಿಯವರ ಅಡ್ಡಗಾಲಿನಿಂದ ಆ ಊರಿಗೆ ರಸ್ತೆ ನಿರ್ಮಾಣವಾಗಿಲ್ಲ. ಹೀಗಾಗಿ ದ್ವೀಪದ ಜನ ನಿತ್ಯ ಪರದಾಡುತ್ತಿದ್ದು, ಗುರುವಾರ ದೋಣಿ ಮೂಲಕ ಸ್ಮಶಾನಕ್ಕೆ ಶವ ಸಾಗಿಸಿದರು! 45 ಎಕರೆ ಪ್ರದೇಶದ ಉಮಳೆಜೂಗದಲ್ಲಿ 30ಕ್ಕೂ…

    ಭಕ್ತಿ ಸಂಗೀತ: ಗೆಜ್ಜೆ ಸದ್ದಿನಲ್ಲಿ ಹೆಜ್ಜೆ ಹಾಕಿದ ಶಾಸಕ!

    ಹಳಿಯಾಳ: ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ತಮ್ಮ 77 ವರ್ಷದ ವಯಸ್ಸು ಮರೆತು ಕುಣಿದು ಕುಪ್ಪಳಿಸಿದರು. ಕೈಯಲ್ಲಿ ಎರಡು ಕೋಲು ಹಿಡಿದು ಅವರು ಕೋಲಾಟ ನಡೆಸಿದರು. ಗುರುವಾರ ರಾತ್ರಿ ಆರಾಧ್ಯದೈವ ತುಳಿಜಾಭವಾನಿ ದರ್ಶನ ಪಡೆದ ಅವರು ಗಂಟೆಗಳ…

    You Missed

    ಜೋಯಿಡಾ ಗಾವಡೆವಾಡಾದ ಖಾಪ್ರಿ ಜಾತ್ರೆ ಯಶಸ್ವಿ ಸಂಪನ್ನ.

    ಜೋಯಿಡಾ ಗಾವಡೆವಾಡಾದ ಖಾಪ್ರಿ ಜಾತ್ರೆ ಯಶಸ್ವಿ ಸಂಪನ್ನ.

    ವರ್ಗಾವಣೆಗೊಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಅವರಿಗೆ ಅದ್ದೂರಿ ಬೀಳ್ಕೊಡುಗೆ.

    ವರ್ಗಾವಣೆಗೊಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಅವರಿಗೆ ಅದ್ದೂರಿ ಬೀಳ್ಕೊಡುಗೆ.

    ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು.

    ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು.

    ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ.

    ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ.

    ಜಿಂಕೆಯ ಬೇಟೆ, ಓರ್ವನ ಬಂಧನ.

    ಜಿಂಕೆಯ ಬೇಟೆ, ಓರ್ವನ ಬಂಧನ.

    ಸಿಡಿಲು ಬಡಿದು ನಾಲ್ವರು ಗಂಭೀರ

    ಸಿಡಿಲು ಬಡಿದು ನಾಲ್ವರು ಗಂಭೀರ

    You cannot copy content of this page