ಶಿರಸಿ: ಹುಲೆಕಲ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಾರುತಿ 800 ಕಾರು ಪಲ್ಟಿಯಾಗಿದ್ದು, ಅದರ 4 ಚಕ್ರ ಆಕಾಶದ ಕಡೆ ಮುಖ ಮಾಡಿದೆ. ಅತಿ ವೇಗವೇ ಈ ಅವಘಡಕ್ಕೆ ಕಾರಣ.
ಬೆಂಗಳೂರಿನಲ್ಲಿ ಹೋಟೆಲ್ ಕೆಲಸ ಮಾಡುವ ನರಸಿಂಹ ಎಂಬಾತ ಈ ಕಾರನ್ನು ಓಡಿಸುತ್ತಿದ್ದ. ಕಲಗಾರು ವಡ್ಡುವಿನ ಬಳಿ ಈ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಅಲ್ಲಿ ರಸ್ತೆ ಎಡಬದಿಯಲ್ಲಿ ನಡೆದು ಹೋಗುತ್ತಿದ್ದ ಮಂಜುನಾಥ ಜೋಗಿ ಮುಕ್ರಿ ಅವರಿಗೆ ಕಾರು ಗುದ್ದಿದ್ದು, ಅದಾದ ನಂತರ ಮುಂದೆ ಚಲಿಸಿ ಹುಲಿಯಪ್ಪನ ಕಟ್ಟೆ ಬಳಿ ಪಲ್ಟಿಯಾಗಿದೆ.
ಕಾರಿನ ಒಳಗಿದ್ದ ಪ್ರಶಾಂತ ಸುಬ್ರಾಯ ನಾಯ್ಕ ಅವರ ಮೂಗು ಹಾಗೂ ಕಿವಿಯಲ್ಲಿ ರಕ್ತ ಬಂದಿದೆ. ಚಾಲಕನ ಪಕ್ಕ ಕೂತಿದ್ದ ಸುಬ್ರಹ್ಮಣ್ಯ ಮಂಜುನಾಥ ನಾಯ್ಕ ಅವರಿಗೂ ಗಾಯವಾಗಿದೆ. ಪಾದಚಾರಿ ಮಂಜುನಾಥ ಜೋಗಿ ಮುಕ್ರಿ ಸಹ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ.