ಕಾರವಾರ: ಜಯ ಕರ್ನಾಟಕ ಜನಪರ ವೇದಿಕೆ ನಾಲ್ಕು ವರ್ಷ ಪೂರೈಸಿ ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.
ಈ ಹಿನ್ನಲೆ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಬಿ ಗುಣರಂಜನ್ ಶೆಟ್ಟಿ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಿದ್ದು, ಕಾರವಾರದ ಕಡವಾಡದ ದೇವತಿ ದೇವಿ ದೇವಸ್ಥಾನದಲ್ಲಿ ಶ್ರೀಗಂಧ ಮತ್ತು ರಕ್ತ ಚಂದನ ಗಿಡವನ್ನು ಶನಿವಾರ ನೆಡಲಾಯಿತು. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಶ್ ಗುನಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘಟನೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಈ ವೇಳೆ ಮಾತನಾಡಿ `ಕಳೆದ ನಾಲ್ಕು ವರ್ಷಗಳಿಂದ ಜನಪರ ಹೋರಾಟಕ್ಕೆ ಸಂಘಟನೆ ಸಾಕಷ್ಟು ಶ್ರಮಿಸಿದೆ. ನಾಡಿನ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆಗೆ ಸಂಘಟನೆ ಸದಾ ಬದ್ಧ\’ ಎಂದರು.
ಸAಘಟನೆಯ ಜಿಲ್ಲಾ ಕಾರ್ಯದರ್ಶಿಂ ಸುದೇಶ್ ನಾಯ್ಕ, ಜಿಲ್ಲಾ ಸಂಚಾಲಕ ಸುನಿಲ್ ತಾಂಡೇಲ್, ಪ್ರಮುಖರಾದ ಸಂದೇಶ್ ಮಾಜಳೆಕರ್, ಸುರೇಂದ್ರ ಮಾಂಜರೇಕರ್ ಅಜಯ್ ಗುನಗಿ, ಸುಧಾಕರ್ ಗುನಗಿ, ಕೃಷ್ಣ ಗುನಿಗಿ, ಪ್ರಕಾಶ್ ಗುನಗಿ ಹಾಜರಿದ್ದು ಗಿಡಗಳನ್ನು ನಾಟಿ ಮಾಡಿದರು.