ಯಲ್ಲಾಪುರ: ಕಿರವತ್ತಿ ಗ್ರಾ ಪಂ ವ್ಯಾಪ್ತಿಯ ಹೊಸಳ್ಳಿ ಗಾಂವಠಾಣದ ಶಾಲೆ ಹಾಗೂ ಅಂಗನವಾಡಿ ಮೇಲೆ ಭಾನುವಾರ ಮರ ಬಿದ್ದಿದೆ.
ಅಪಾಯಕಾರಿ ಸ್ಥಿತಿಯಲ್ಲಿರುವ ಮರ ತೆರವು ಮಾಡುವಂತೆ ಊರಿನವರು ತಿಂಗಳ ಹಿಂದೆ ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದರು. ಗ್ರಾಮ ಪಂಚಾಯತ ಮೂಲಕವು ಆ ಭಾಗದ ಸದಸ್ಯರು ಮರ ತೆರವಿಗೆ ಒತ್ತಾಯಿಸಿದ್ದರು. ಆದರೆ, ಅಪಾಯಕಾರಿಯಾಗಿರುವ ಮರ ತೆರವಿಗೆ ಯಾರೂ ಆಸಕ್ತಿ ತೋರಿರಲಿಲ್ಲ.
ಇದೀಗ ಭಾರೀ ಪ್ರಮಾಣದ ಗಾಳಿ-ಮಳೆಗೆ ಮರ ಅಂಗನವಾಡಿ ಮೇಲೆ ಮುರಿದು ಬಿದ್ದಿದೆ. ಭಾನುವಾರ ಆ ಪ್ರದೇಶದಲ್ಲಿ ಮಕ್ಕಳು ಇಲ್ಲದ ಕಾರಣ ಜೀವಾಪಾಯದಿಂದ ಪಾರಾಗಿದ್ದಾರೆ. `ಜನ ದೂರು ನೀಡಿದರೂ ಕ್ರಮ ಜರುಗಿಸದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಮಕ್ಕಳ ಸುರಕ್ಷತೆ ಕಡೆ ಗಮನಹರಿಸಬೇಕು\’ ಎಂದು ಊರಿನವರು ಆಗ್ರಹಿಸಿದ್ದಾರೆ.