ಸಾಮಾಜಿಕ ಜಾಲತಾಣದಲ್ಲಿ ಜನಪ್ರತಿನಿಧಿಯೊಬ್ಬರನ್ನು ಗುರಿಯಾಗಿರಿಸಿಕೊಂಡು ಅಕ್ಷರ ದಾಳಿ ನಡೆದಿದ್ದು, ಅದನ್ನು ಶೇರ್ ಮಾಡಿದ ಇನ್ನೊಬ್ಬ ಜನಪ್ರತಿನಿಧಿ ವಿರುದ್ಧ ವ್ಯಕ್ತಿಯೊಬ್ಬರು ಪೊಲೀಸ್ ದೂರು ನೀಡಿದ್ದಾರೆ.
ರಾಜಕಾರಣಿಯೊಬ್ಬರ ಮನೆ ಮೇಲೆ ನಡೆದ ದಾಳಿಯಲ್ಲಿ ಸಿಕ್ಕ ಪೆನ್ ಡ್ರೈವ್\’ನಲ್ಲಿ ಉತ್ತರ ಕನ್ನಡ ಜಿಲ್ಲೆಯ ರಾಜಕಾರಣಿಯೊಬ್ಬರ ಅಶ್ಲೀಲ ವಿಡಿಯೋ ಇರುವ ಬಗ್ಗೆ ವದಂತಿ ಹಬ್ಬಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿನ ಪುಟವೊಂದು ಸ್ವಾರಸ್ಯಕರ ರೀತಿಯಲ್ಲಿ ಪ್ರಕಟಿಸಿದೆ. ಈ ಬಗ್ಗೆ ಎಲ್ಲಡೆ ಗುಸು ಗುಸು ಚರ್ಚೆ ನಡೆದಿದ್ದು, ಅಲ್ಲಿನ ಬರಹಗಳು ಪರೋಕ್ಷವಾಗಿ ಯಲ್ಲಾಪುರದ ಹಿರಿಯ ಜನಪ್ರತಿನಿಧಿಯೊಬ್ಬರನ್ನು ಬೊಟ್ಟು ಮಾಡಿದ ರೀತಿಯಲ್ಲಿದೆ.
ಇದನ್ನು ಯಲ್ಲಾಪುರದ ಆನಗೋಡು ಗ್ರಾ ಪಂ ಸದಸ್ಯ ಕೆ ಟಿ ಹೆಗಡೆ ವಿವಿಧ ಕಡೆ ಶೇರ್ ಮಾಡಿದ್ದಾರೆ. ಈ ಹಿನ್ನಲೆ ಸಾಮಾಜಿಕ ಕಾರ್ಯಕರ್ತ ನರಸಿಂಹ ಭಟ್ಟ ಬೋಳಪಾಲು ಕೆ ಟಿ ಹೆಗಡೆ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.
`ತಾನು ಅಡ್ಮಿನ್ ಇರುವ ಸ್ನೇಹ ಬಳಗ ಗ್ರೂಪಿನಲ್ಲಿ ಅಸಬಂದ್ಧ ಪೋಸ್ಟ ಹಾಕಲಾಗಿತ್ತು. ಜನಪ್ರತಿನಿಧಿಯೊಬ್ಬರ ತೇಜೋವಧೆಗೆ ಯತ್ನಿಸಿದ ಕಾರಣ ದೂರು ನೀಡಿದ್ದೇನೆ\’ ಎಂದು ನರಸಿಂಹ ಭಟ್ಟ ಹೇಳಿದ್ದಾರೆ. `ದೂರು ನೀಡುವ ಮೂಲಕ ಆ ಪೋಸ್ಟ್ ಯಾರಿಗೆ ಸಂಬoಧಿಸಿದ್ದು ಎಂದು ಎಲ್ಲರಿಗೂ ಹೇಳಿಕೊಂಡ ಹಾಗಿದೆ. ಈ ಬಗ್ಗೆ ನಂತರ ಪ್ರತಿಕ್ರಿಯಿಸುವೆ\’ ಎಂದು ಕೆ ಟಿ ಹೆಗಡೆ ಹೇಳಿದರು.