ಸ್ಥಗಿತಗೊಂಡ ಎಸ್.ಬಿ.ಐ ಎಟಿಎಂ ಕೇಂದ್ರವನ್ನು ಪುನರಾರಂಭಿಸುವಂತೆ ಆಗ್ರಹ.



ದಾಂಡೇಲಿ :

ಬಂಗೂರನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಎಸ್.ಬಿ.ಐ ಎಟಿಎಂ ಕೇಂದ್ರವು ಸ್ಥಗಿತಗೊಂಡು ಏಳೆಂಟು ತಿಂಗಳಾಗಿದ್ದು, ಇದರಿಂದ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ತೆಗೆದುಕೊಂಡಿರುವ ಈ ಎಟಿಎಂ ಕೇಂದ್ರವನ್ನು ಕೂಡಲೇ ಪುನರಾರಂಭಿಸಬೇಕೆಂದು ಸ್ಥಳೀಯ ಸಾರ್ವಜನಿಕರು ಭಾನುವಾರ  ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ.

ಚೌದರಿ ಗೇಟ್ ಹತ್ತಿರದಲ್ಲಿ ಬಂಗೂರನಗರ ಪ್ರದೇಶ ವ್ಯಾಪ್ತಿಯಲ್ಲಿರುವ ಎಸ್.ಬಿ.ಐ ಬ್ಯಾಂಕಿನ ಈ ಎಟಿಎಂ ಕೇಂದ್ರದಿಂದ ಸಾಕಷ್ಟು ಜನರಿಗೆ ಅನುಕೂಲವಾಗುತ್ತಿತ್ತು. ವಾರದ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಪ್ರವಾಸಿಗರು ಬರುತ್ತಿರುವುದರಿಂದ ಈ ಎಟಿಎಂ ಕೇಂದ್ರ ಎಲ್ಲರಿಗೂ ಅನುಕೂಲಕರವಾಗಿತ್ತು. ಆದರೆ ಇದೀಗ ಕಳೆದ ಏಳೆಂಟು ತಿಂಗಳಿನಿಂದ ಈ ಎಟಿಎಂ ಕೇಂದ್ರ ಸ್ಥಗಿತಗೊಂಡಿರುವುದರಿಂದ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ಪ್ರವಾಸಿಗರಿಗೂ ತೀವ್ರ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಈ ಎಟಿಎಂ ಕೇಂದ್ರವನ್ನು ಪುನರಾರಂಭಿಸಲು ತ್ವರಿತ ಕ್ರಮವನ್ನು ಕೈಗೊಳ್ಳಬೇಕೆಂದು ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ.

  • Sanjay Patil

    Related Posts

    ಜೋಯಿಡಾ ಗಾವಡೆವಾಡಾದ ಖಾಪ್ರಿ ಜಾತ್ರೆ ಯಶಸ್ವಿ ಸಂಪನ್ನ.

    ಜೋಯಿಡಾ: ತಾಲೂಕಿನ ಖಾಪ್ರಿ(ಕಂಬಳಿ) ಜಾತ್ರೆ ಎಂದೇ ಪ್ರಸಿದ್ಧವಾದ ಬುಡಕಟ್ಟು ಕುಣಬಿ ಜನರ ಗಾವಡೆವಾಡಾದ ಖಾಪ್ರಿ ಜಾತ್ರೆ ಸಾವಿರಾರು ಭಕ್ತರ ಸೇವೆಯೊಂದಿಗೆ ಸಂಪನ್ನಗೊಂಡಿತು. ತಾಲೂಕಿನ ಬುಡಕಟ್ಟು ಕುಣಬಿ ಸಮುದಾಯದ ವಿಶಿಷ್ಟ ಸಂಪ್ರದಾಯ ಗಳೊಂದಿಗೆ ಗುರುವಾರದಂದು ಜಾತ್ರೆ ಅತ್ಯಂತ ಭಕ್ತಿ – ಭಾವಗಳ ಸಂಯೋಗದೊಂದಿಗೆ…

    ವರ್ಗಾವಣೆಗೊಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಅವರಿಗೆ ಅದ್ದೂರಿ ಬೀಳ್ಕೊಡುಗೆ.

    ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಯಾಗಿರುವ  ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ.ಟಿ ಜಯಕುಮಾರ ಅವರಿಗೆ ಅದ್ದೂರಿಯಾಗಿ ಬೀಳ್ಕೊಡಲಾಯಿತು. ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಬೀಳ್ಕೋಡುಗೆ ಸಮಾರಂಭದಲ್ಲಿ  ಸಿ.ಟಿ ಜಯಕುಮಾರ ಅವರನ್ನು ಸನ್ಮಾನಿಸಲಾಯಿತು. ಕೆಲವು…

    Leave a Reply

    Your email address will not be published. Required fields are marked *

    You Missed

    ಜೋಯಿಡಾ ಗಾವಡೆವಾಡಾದ ಖಾಪ್ರಿ ಜಾತ್ರೆ ಯಶಸ್ವಿ ಸಂಪನ್ನ.

    ಜೋಯಿಡಾ ಗಾವಡೆವಾಡಾದ ಖಾಪ್ರಿ ಜಾತ್ರೆ ಯಶಸ್ವಿ ಸಂಪನ್ನ.

    ವರ್ಗಾವಣೆಗೊಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಅವರಿಗೆ ಅದ್ದೂರಿ ಬೀಳ್ಕೊಡುಗೆ.

    ವರ್ಗಾವಣೆಗೊಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಅವರಿಗೆ ಅದ್ದೂರಿ ಬೀಳ್ಕೊಡುಗೆ.

    ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು.

    ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು.

    ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ.

    ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ.

    ಜಿಂಕೆಯ ಬೇಟೆ, ಓರ್ವನ ಬಂಧನ.

    ಜಿಂಕೆಯ ಬೇಟೆ, ಓರ್ವನ ಬಂಧನ.

    ಸಿಡಿಲು ಬಡಿದು ನಾಲ್ವರು ಗಂಭೀರ

    ಸಿಡಿಲು ಬಡಿದು ನಾಲ್ವರು ಗಂಭೀರ

    You cannot copy content of this page