ಕಾರವಾರ:
ಗೋಕರ್ಣ ಭಾಗದಲ್ಲಿ ಅನಧಿಕೃತವಾಗಿ ವಿಹಾರಾರ್ಥಿ ಬೋಟಿಂಗ್ ನಡೆಸುವವರಿಂದ ಗುತ್ತಿಗೆ ಪಡೆದು ಬೋಟಿಂಗ್ ನಡೆಸಿವವರ ಉದ್ಯಮವು ನಷ್ಟದಲ್ಲಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಓಂ ಬೀಚ್ ಟೂರಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಚಿದಾನಂದ ಲಕ್ಕುಮನೆ ಹೇಳಿದರು.
ನಗರದಲ್ಲಿ ಸೋಮವಾರ ಮಾತನಾಡಿದ ಅವರು,
ಈಹಿಂದೆ ಜಿಲ್ಲಾಡಳಿತವು ಗುತ್ತಿಗೆ ಪದ್ದತಿ ತಂದಿದೆ. ಬಳಿಕ ನಾವೇ ಟೆಂಡರ್ ಪಡೆದು ಉದ್ಯಮ ನಡೆಸುತ್ತಿದ್ದೇವೆ. ಅದರಂತೆ ಸರಕಾರಕ್ಕೆ ಪ್ರತಿ ತಿಂಗಳು ೧.೦೭ ಲಕ್ಷ ರೂ. ಪಾವತಿ ಮಾಡುತ್ತಿದ್ದೇವೆ. ಆದರೆ ಇದೀಗ ಅನಧಿಕೃತವಾಗಿ ಬೋಟಿಗ್ ನಡೆಸುವವರು ನಮ್ಮ ಉದ್ಯಮವನ್ನು ಹಾಳು ಮಾಡುತ್ತಿದ್ದು ಬೋಟ್ ಮಾಲೀಕರು ನಷ್ಟದಲ್ಲಿದ್ದಾರೆ ಎಂದರು.
ಕೊರೋನಾ ವೇಳೆ ಉದ್ಯೋಗವು ನಷ್ಟವಾಗಿತ್ತು. ಅದು ಮತ್ತೆ ಪ್ರಾರಂಭವಾಗುವಾಗಲೇ ಅನಧಿಕೃತವಾಗಿ ಬೋಟ್ ಮಾಲೀಕರು ಬೋಟಿಂಗ್ ಪ್ರಾರಂಭಿಸಿದ್ದಾರೆ. ಟೆಂಡರ್ ಪಡೆದು ಉದ್ಯಮ ನಡೆಸುತ್ತಿರುವ ಜಾಗದಲ್ಲಿಯೂ ಬೋಟಿಂಗ್ ಮಾಡುತ್ತಿದ್ದಾರೆ. ಅಲ್ಲದೇ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಕರಪತ್ರ ನೀಡಿ ಅವರನ್ನು ತಮ್ಮತ್ತ ಸೆಳೆದುಕೊಂಡು ನಮಗೆ ನಷ್ಟ ಮಾಡುತ್ತಿದ್ದಾರೆ. ಯಾವುದೆ ಸುರಕ್ಷತೆ ಇಲ್ಲದೇ ಪ್ರವಾಸಿಗರನ್ನು ಕರೆದಿಯ್ಯುತ್ತಾರೆ ಎಂದು ಆರೋಪಿಸಿ, ಅವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದರು.