
ಕಾರವಾರ:
ತಾಲೂಕಿನ ಕೈಗಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೋಧನೋರ್ವ ಅನುಮಾನಾಸ್ಪದವಾಗಿ ಸಾವನಪ್ಪಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಹರವಿಂದರ್ ಕುಮಾರ್ ರಾಮ್ (28 )ಮೃತಪಟ್ಟ ಯೋಧ ಎಂದು ಗುರುತಿಸಲಾಗಿದೆ. ಮೃತ ಯೋಧ ಬಿಹಾರ ಮೂಲದವನಾಗಿದ್ದು (Bihar Native) ಕಳೆದ ಎರಡು ವರ್ಷದಿಂದ ಮಲ್ಲಾಪುರದ ಸಿಐಎಸ್ಎಪ್ (CISF) ಕ್ಯಾಂಪಿನಲ್ಲಿ ಕರ್ತವ್ಯದಲ್ಲಿದ್ದ. ಪೆಟ್ರೋಲಿಂಗ ತೆರಳುವ ವೇಳೆಯಲ್ಲಿ ವಾಹನದ ಹಿಂಬದಿ ಕೂತಿದ್ದರು ಎನ್ನಲಾಗಿದೆ. ರೈಫಲ್ನಿಂದ ಗುಂಡು ಹಾರಿದ್ದು ತಲೆಯ ಭಾಗ ಸೀಳಿ ಛಿದ್ರವಾಗಿದೆ.
ತಾನು ಬಳಸುತ್ತಿದ್ದ ರೈಪಲ್ ನಿಂದಲೇ ಗುಂಡು ಹಾರಿಸಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು ಸಾವಿಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಸ್ಥಳಕ್ಕೆ ಮಲ್ಲಾಪುರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.