ಕಾರವಾರ:
ಬೇಲೆಕೇರಿ ಅದಿರು ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯವು ಶಾಶಕ ಸತೀಶ್ ಸೈಲ್ ಅವರಿಗೆ ವಿಧಿಸಿದ್ದ ಶಿಕ್ಣೆಯನ್ನು ಹೈಕೋರ್ಟ್ ಅಮಾನತು ಮಾಡಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾರವಾರದಲ್ಲಿ ಪಟಾಕಿ ಸಿಡಿಸಿ, ಸಹಿ ಹಂಚಿ ಸಂಭ್ರಮಿಸಿದರು.
ಇಲ್ಲಿನ ಸುಭಾಷ ವೃತ್ತ ಹಾಗೂ ಸವಿತಾ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸತೀಶ ಸೈಲ್ ಬೆಂಬಲಿಗರು ಸೈಲ್ ಪರವಾಗಿ ಘೋಷಣೆ ಕೂಗಿದರು. ಬಳಿಕ ಪಟಾಕಿ ಸಿಡಿಸಿ ಪರಸಗಪರ ಸಿಹಿ ಹಂಚಿ ಸಂಭ್ರಮಿಸಿದರು.