ಗೋಕರ್ಣ:
ಇಲ್ಲಿನ ಸಂತೆಯಲ್ಲಿ ತರಕಾರಿ ಖರೀದಿಸಲು ಬಂದಿದ್ದ ಕಾರ್ಮಿಕರಿಗೆ ಸಿಡಿಲು ಬಡಿದು ನಾಲ್ವರು ಗಾಯಗಳಾಗಿದೆ.
ಗುರುವಾರ ತರಕಾರಿ ಖರೀದಿಗೆ ಹೋದ ಹೊರ ರಾಜ್ಯದ ಮೂವರು ಕಾರ್ಮಿಕರು ಸಂಜೆಯ ವೇಳೆ ಮಳೆ ಬಂದ ಕಾರಣ ಮರದ ಕೆಳಗೆ ನಿಂತಿದ್ದರು. ಅವರಲ್ಲಿ ಓರ್ವ ಸ್ಥಳೀಯರು ಇದ್ದರು ಎನ್ನಲಾಗಿದೆ. ಈ ವೇಳೆ ಸಿಡಿಲು ಬಡಿದು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವೈದ್ಯಾಧಿಕಾರಿ ಡಾ.ಜಗದೀಶ ನಾಯ್ಕ ಮತ್ತು ಸಿಬ್ಬಂದಿಯಿಂದ ಚಿಕಿತ್ಸೆ ಮುಂದುವರೆದಿದೆ.
ಜೋಯಿಡಾ ಗಾವಡೆವಾಡಾದ ಖಾಪ್ರಿ ಜಾತ್ರೆ ಯಶಸ್ವಿ ಸಂಪನ್ನ.
ಜೋಯಿಡಾ: ತಾಲೂಕಿನ ಖಾಪ್ರಿ(ಕಂಬಳಿ) ಜಾತ್ರೆ ಎಂದೇ ಪ್ರಸಿದ್ಧವಾದ ಬುಡಕಟ್ಟು ಕುಣಬಿ ಜನರ ಗಾವಡೆವಾಡಾದ ಖಾಪ್ರಿ ಜಾತ್ರೆ ಸಾವಿರಾರು ಭಕ್ತರ ಸೇವೆಯೊಂದಿಗೆ ಸಂಪನ್ನಗೊಂಡಿತು. ತಾಲೂಕಿನ ಬುಡಕಟ್ಟು ಕುಣಬಿ ಸಮುದಾಯದ ವಿಶಿಷ್ಟ ಸಂಪ್ರದಾಯ ಗಳೊಂದಿಗೆ ಗುರುವಾರದಂದು ಜಾತ್ರೆ ಅತ್ಯಂತ ಭಕ್ತಿ – ಭಾವಗಳ ಸಂಯೋಗದೊಂದಿಗೆ…