ಶಿರಸಿ:
ಜಿಂಕೆ ಬೇಟೆಯಾಡಿದ ಮೂವರ ಪೈಕಿ ಓರ್ವ ಆರೋಪಿಯನ್ನ ಬಂಧಿಸಲಾಗಿದ್ದು, ಇನ್ನಿಬ್ಬರೂ ಆರೋಪಿಗಳು ಪರಾರಿಯಾಗಿರುವ ಘಟನೆ ಜಿಲ್ಲೆಯ ಶಿರಸಿ ತಾಲೂಕಿನ ಉಂಚಳ್ಳಿಯಲ್ಲಿ ನಡೆದಿದೆ.
ಉಂಚಳ್ಳಿ ಗ್ರಾಮದ ಗಣಪತಿ ಮಂಜುನಾಥ ಗೌಡಾ ಬಂಧಿ ಆರೋಪಿಯಾಗಿದ್ದು ಇನ್ನುಳಿದ ಆರೋಪಿ ಉಂಚಳ್ಳಿಯ ವೆಂಕಟೇಶ ನಾರಾಯಣ ನಾಯ್ಕ ಹಾಗೂ ಗಣೇಶ ಸುಬ್ರಾಯ ನಾಯ್ಕ ಪರಾರಿಯಾಗಿದ್ದಾರೆ.
ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾದಿಕಾರಿಗಳಾದ ಡಾ.ಅಜ್ಜಯ್ಯ ಜಿ ಆರ್, ಉಪ ಅರಣ್ಯ ಸಹಾಯಕ ಸಂರಕ್ಷಣಾದಿಕಾರಿಗಳಾದ ಎಸ್ ಎಸ್ ನಿಂಗಾಣಿ ಮಾರ್ಗದರ್ಶನ ಮತ್ತು ಶಿರಸಿ ವಲಯ ಅರಣ್ಯಾದಿಕಾರಿ ಗಿರೀಶ ಎಲ್ ನಾಯ್ಕ ನೇತ್ರದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಜೋಯಿಡಾ ಗಾವಡೆವಾಡಾದ ಖಾಪ್ರಿ ಜಾತ್ರೆ ಯಶಸ್ವಿ ಸಂಪನ್ನ.
ಜೋಯಿಡಾ: ತಾಲೂಕಿನ ಖಾಪ್ರಿ(ಕಂಬಳಿ) ಜಾತ್ರೆ ಎಂದೇ ಪ್ರಸಿದ್ಧವಾದ ಬುಡಕಟ್ಟು ಕುಣಬಿ ಜನರ ಗಾವಡೆವಾಡಾದ ಖಾಪ್ರಿ ಜಾತ್ರೆ ಸಾವಿರಾರು ಭಕ್ತರ ಸೇವೆಯೊಂದಿಗೆ ಸಂಪನ್ನಗೊಂಡಿತು. ತಾಲೂಕಿನ ಬುಡಕಟ್ಟು ಕುಣಬಿ ಸಮುದಾಯದ ವಿಶಿಷ್ಟ ಸಂಪ್ರದಾಯ ಗಳೊಂದಿಗೆ ಗುರುವಾರದಂದು ಜಾತ್ರೆ ಅತ್ಯಂತ ಭಕ್ತಿ – ಭಾವಗಳ ಸಂಯೋಗದೊಂದಿಗೆ…