
ಭಟ್ಕಳ:
ಪುರಸಭೆ ಮುಖ್ಯಾಧಿಕಾರಿಯೋರ್ವರು ಲಂಚ ಸ್ವೀಕರಿಸುತ್ತಿರುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಭಟ್ಕಳ ನೀಲಕಂಠ ಮೇಸ್ತಾ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಅಧಿಕಾರಿ.
ಮೊಹ್ಮದ ಇದ್ರಿಸ್ ಮೋಹತೇಷಾಮ್ ಎನ್ನುವವರ ನೀಡಿದ ದೂರಿನ ಆಧಾರದ ಮೇಲೆ ಶುಕ್ರವಾರ ಕಾರವಾರ ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ಹಾಗೂ ಪ್ರಭಾರಿ ಲೋಕಾಯುಕ್ತ ಡಿವೈಎಸ್ಪಿ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಒಳಚರಂಡಿಗೆ ಸಂಬಂದ ಪಟ್ಟ ವಿಷಯಕ್ಕೆ ಲಂಚ ಸ್ವೀಕರಿಸುತ್ತಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.
ದೂರುದಾರ ನೀಡಿದ ಹೇಳಿಕೆ ಪ್ರಕಾರ ನೀಲಕಂಠ ಮೇಸ್ತಾ ಒಳಚರಂಡಿ ಜೋಡಣೆಗೆ 3 ಲಕ್ಷ ಲಂಚಾ ಕೇಳಿದ್ದರು. ಈಗಾಗಲೇ 2 ಲಕ್ಷ ಹಣವನ್ನು ನೀಡಿದು. ಶುಕ್ರವಾರ 50 ಸಾವಿರ ಹಣ ನೀಡಿದ್ದೇನೆ ಮತ್ತು ಇನ್ನು 50 ಸಾವಿರ ಕೊಡುವುದು ಬಾಕಿ ಇತ್ತು ಎಂದು ತಿಳಿಸಿದ್ದಾರೆ.ದಾಳಿಯಲ್ಲಿ ಪ್ರಸಾದ ಪನ್ನೆಕರ ಹಾಗೂ 20 ಜನ ಪಿ.ಐ ಸಿಬ್ಬಂದಿಗಳು ಇದ್ದರು ಸದ್ಯ ಲೋಕಾಯುಕ್ತ ಅಧಿಕಾರಿಗಳು ಪುರಸಭೆ ಕಚೇರಿಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾರನ್ನು ವಿಚಾರಣೆ ನಡೆಸುತ್ತಿದ್ದಾರೆ.