
ಸಿದ್ದಾಪುರ:
ವೈದ್ಯರ ನಿರ್ಲಕ್ಷದಿಂದ ಇತ್ತೀಚೆಗೆ ಮೃತಪಟ್ಟ ಹೊಸೂರಿನ ವಿನೋದಾ ಹಾಗೂ ಕೋಣನಗದ್ದೆಯ ಜ್ಯೋತಿ ಇವರ ಮನೆಗೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಎರಡು ಕುಟುಂಬಕ್ಕೂ ತಲಾ 50 ಸಾವಿರ ಧನಸಹಾಯ ಮಾಡುವ ಮೂಲಕ ಧೈರ್ಯ ತುಂಬಿದರು.
ಅಲ್ಲದೇ ಅನಾರೋಗ್ಯದಿಂದ ನಿಧನರಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಕೋಲಶಿರ್ಸಿಯ ಈರೇಶ ನಾಯ್ಕ ಹಾಗೂ ಚನಮಾಂವನ ಈಶ್ವರ ನಾಯ್ಕ ಇವರ ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯ ನೀಡಿದರು. ಜತೆಗೆ ವಿದ್ಯುತ್ ಅವಘಡದಿಂದ ಕೊಟ್ಟಿಗೆಗೆ ಬೆಂಕಿ ತಗುಲಿ ಜಾನುವಾರು ಮೃತಪಟ್ಟ ಕೋಲಶಿರ್ಸಿಯ ಉಮೇಶ ನಾಯ್ಕ ಇವರ ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯ ನೀಡಿದರು.