
ಕಾರವಾರ:
ಚಿತ್ತಾಕುಲ ಸಮೀಪದ ಹೊಳೆ ಗಜನಿಯಲ್ಲಿ ಈಜಲು ಹೋಗಿ ಅಪಾಯಕ್ಕೆ ಸಿಲುಕಿದ ಯುವಕರಿಬ್ಬರನ್ನ ಸ್ಥಳೀಯರೋರ್ವರು ರಕ್ಷಣೆ ಮಾಡಿದ ಘಟನೆ ಭಾನುವಾರ ನಡೆದಿದೆ.
ಚಿತ್ತಾಕುಲ ಸಮಿಪದ ಹೊಳೆಯಲ್ಲಿ ಇಬ್ಬರು ಯುವಕರು ಈಜಲು ತೆರಳಿದ್ದರು. ಅಪಾಯಕ್ಕೆ ಸಿಲುಕಿ ಕೂಗಾಡುತ್ತಿದ್ದಾಗ ಅದೇ ವೇಳೆ ಅಲ್ಲೆ ಪಕ್ಕದಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದ ದೇವಭಾಗ ರೆಸಾರ್ಟ್ ಸಿಬ್ಬಂದಿ ಪ್ರವೀಣ ಹರಿಕಾಂತ ಎಂಬುವವರು ಗಮನಿಸಿದ್ದಾರೆ. ಯುವಕರು ಚಿರಾಡುತ್ತಿರುವುದನ್ನ ಕೇಳಿಸಿಕೊಂಡ ಅವರು ತಕ್ಷಣ ನೀರಿಗೆ ದುಮುಕಿ, ಇಬ್ಬರನ್ನ ರಕ್ಷಿಣೆ ಮಾಡಿದ್ದಾರೆ.
ಚಿತ್ತಾಕುಲ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಬ್ಬರು ಯುವಕರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.