
ಅಂಕೋಲಾ:
ಗಂಡ ಹೆಂಡತಿನಡುವೆ ಜಗಳವಾಗಿದ್ದು ಸಿಟ್ಟಾದ ಪತ್ನಿ ತನ್ನ ಪತಿಯ ಮೇಲೆ ಬಿಸಿ ನೀರಿನ ಎರಚಿದ ಘಟನೆ ಅಂಕೋಲಾ ತಾಲೂಕಿನ ಬಾಳೆಗುಳಿಯಲ್ಲಿ ನಡೆದಿದೆ.
ಶುಕ್ರವಾರ ನಡೆದ ಜಗಳದಲ್ಲಿ ಬಾಳೆಗುಳಿಯ ವಿಷ್ಣು ಬುದ್ದು ಗೌಡ ದಂಪತಿಯ ನಡುವೆ ಜಗಳಶುರುವಾಗಿದೆ. ಮಾತಿಗೆ ಮಾತು ಬೆಳೆದಾಗ ವಿಷ್ಣು ಅವರ ಪತ್ನಿ ಒಲೆ ಮೇಲಿದ್ದ ಬಿಸಿ ನೀರನ್ನು ಗಂಡನ ಮೇಲೆ ಸುರಿದಿದ್ದಾರೆ. ಬಿಸಿ ನೀರಿನಲ್ಲಿ ಬೆಂದ ಅವರು ಆಸ್ಪತ್ರೆ ಸೇರಿದ್ದಾರೆ.
ಕುದಿಯುತ್ತಿದ್ದ ನೀರು ಎರಚಿದ ಪರಿಣಾಮ ವಿಷ್ಣು ಗೌಡ ಅವರ ಮುಖ, ಕುತ್ತಿಗೆ, ಎದೆ ಹಾಗೂ ಬೆನ್ನಿನ ಭಾಗ ಸುಟ್ಟಿದೆ. ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಮುನಿಸಿಕೊಂಡ ಪತ್ನಿ ತವರು ಮನೆಗೆ ಹೋಗಿದ್ದಾರೆ ಎನ್ನಲಾಗಿದೆ.