
ದಾಂಡೇಲಿ :
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ಹಾಗೂ
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ, ದಾಂಡೇಲಿ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಕಾರ್ತಿಕ ಅನುದಿನ-ಅನುಸ್ಪಂದನಾ ಕಾರ್ಯಕ್ರಮದಡಿಯಲ್ಲಿ
“ಕನ್ನಡ ಭಾವಗೀತೆಗಳ ಸಮಾಗಮ” ಕಾರ್ಯಕ್ರಮ ನಾಳೆ ಮಂಗಳವಾರ ಸಂಜೆ ೬ ಗಂಟೆಗೆ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ.
ಬಂಗೂರನಗರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಆಶಾಲತಾ ಜೈನ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ.ದಾಂಡೇಲಿ ತಾಲೂಕು ಕಸಾಪ ಅಧ್ಯಕ್ಷ ನಾರಾಯಣ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ರೋಶನ ನೇತ್ರಾವಳಿ ಹಾಗೂ ಶೋಭಾ ಮುದ್ದಪ್ಪನವರ ಭಾಗವಹಿಸಲಿದ್ದಾರೆ. ಜಿಲ್ಲಾ ಕಸಾಪ ಕೋಶಾಧ್ಯಕ್ಷರಾದ ಮುರ್ತುಜಾಹುಸೇನ್ ಆನೆಹೊಸೂರ ಉಪಸ್ಥಿತರಿರುವರು.
ಕನ್ನಡ ಭಾವಗೀತೆಗಳ ಸಮಾಗಮಾದಲ್ಲಿ
ಗಾಯಕರಾದ ರಘುವಿರ ಗೌಡಾ, ವಿಜಯ ಚವ್ಹಾಣ
ಮಹಂತೇಶ್ ಅವರು ತಮ್ಮ ಸುಮಧುರ ಕಂಠದಿಂದ ಭಾವಗೀತೆಗಳನ್ನು ಹಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಭಿಮಾನಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವಂತೆ ಕಸಾಪ ತಾಲೂಕಾಧ್ಯಕ್ಷ ನಾರಾಯಣ ನಾಯ್ಕ ವಿನಂತಿಸಿದ್ದಾರೆ.