
ದಾಂಡೇಲಿ:
ನಗರದ ಡಿ.ಎಫ.ಎ ಟೌನಶಿಪನ ಅಂಗನವಾಡಿ ಕೇಂದ್ರದಲ್ಲಿ ಇಂದು ಬೆಳಿಗ್ಗೆ ಮಕ್ಕಳ ದಿನಾಚರಣೆ ನಡೆಯಿತು.
ಅತಿಥಿಗಳಿಂದ ದೀಪ ಬೆಳಗಿಸಿ ಹಾಗೂ ಭಾರತದ ಮೊದಲ ಪ್ರಧಾನಿ, ‘ಭಾರತ ರತ್ನ’ ಪಂಡಿತ್ ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಹೂವನ್ನು ಅರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಾರ್ಡ ನಂಬರ ೧೯ ರ ನಗರಸಭೆ ಸದಸ್ಯ ದಶರಥ ಬಂಡಿವಡ್ಡರ ಮಕ್ಕಳ ದಿನಾಚರಣೆ ಬಗ್ಗೆ ತಿಳಿಸಿದರು.
ಅಂಗನವಾಡಿ ಟೀಚರ್ ಮಂಜುಳಾ ಜಟ್ಟಿ ಮಕ್ಕಳಿಗೆ ಶುಭ ಹಾರೈಸಿದರು. ಮಕ್ಕಳಿಗೆ ಸಿಹಿ ಹಾಗೂ ಉಡುಗೊರೆಯನ್ನು ನೀಡಲಾಯಿತು.ಇ ಸಂದರ್ಭದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಪ್ರತಿಭಾ ಪರಬ್ , ನಿವೃತ್ತ ಶಿಕ್ಷಕಿ ಲಲಿತಾ ನಾಯ್ಕ,ಅಂಗನವಾಡಿ ಸಹಾಯಕಿ ಲಕ್ಷ್ಮೀ ಮೂರಾರಿ ಹಾಗೂ ವಾರ್ಡನ ಹಿರಿಯರು ಉಪಸ್ಥಿತರಿದ್ದರು.