
ಕಾರವಾರ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.21 ರಂದು ಜಿಲ್ಲೆಗೆ ಬರುವ ಮುನ್ನ ಇಲ್ಲಿನ ನಕಲಿ ಜಾತಿ ಪ್ರಮಾಣ ಪತ್ರಗಳ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಭಟ್ಕಳಕ್ಕೆ ಬರುವ ಅವರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಜಿಲ್ಲಾ ಅನುಸೂಚಿತ ಜಾತಿ ಹಾಗೂ ಬುಡಕಟ್ಟುಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದ ಅಧ್ಯಕ್ಷ ತುಳಸಿದಾಸ ಪಾವಸ್ಕರ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಮೊಗವೀರರು ನಿಜವಾದ ದಲಿತರಿಗೆ ಸಿಗಬೇಕಾದ ಸಂವಿಧಾನ ಬದ್ದ ಹಕ್ಕಿಗಳಿಂದ ವಂಚಿಸಿದ್ದಾರೆ. ಮೀನುಗಾರಿಕೆ ವೃತ್ತಿ ಮಾಡುವ ಮೊಗವೀರರು ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಜಿಲ್ಲೆಯಾದ್ಯಂತ ಹೋರಾಟ ಮಾಡಿದ್ದೇವೆ. ಅನೇಕ ಮನವಿ ನೀಡಿದ್ದೇವೆ. ಆದರೆ ಪ್ರಯೋಜನ ಆಗಿಲ್ಲ. ಜಿಲ್ಲಾಡಳಿತ ಹಾಗು ಸರಕಾರ ದಲಿತರ ವಿರೋಧಿಯಾಗಿದೆ. ಕಾರ್ಯಕ್ರಮವೊಂದಕ್ಕೆ ನ.21 ರಂದು ಭಟ್ಕಳಕ್ಕೆ ಬರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಬರುವ ಮುನ್ನ ನಮ್ಮಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ದಲಿತರ ನಡೆ ಭಟ್ಕಳದ ಕಡೆ ಎನ್ನುವ ಘೋಷವಾಖ್ಯದಲ್ಲಿ ಅವರಿಗೆ ಸಾವಿರಾರು ದಲಿತರು ಮುತ್ತಿಗೆ ಹಾಕುತ್ತೇವೆ ಎಂದರು.