
ಕಾರವಾರ:
ರೈರತ ಭೂಮಿಯನ್ನು ಕಬಳಿಸುತ್ತಿರುವ ವಕ್ಫ್ ಕಾರ್ಯವನ್ನು ಖಂಡಿಸಿ ಜಿಲ್ಲಾ ಬಿಜೆಪಿ ಹಾಗೂ ವಿವಿಧ ಸಂಘಟನೆಗಳೊಂದಿಗೆ ನ.21 ರಂದು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಧರಣಿಯು ನಮ್ಮಭೂಮಿ ನಮ್ಮಹಕ್ಕು ಎನ್ನುವ ಘೋಷವಾಖ್ಯದಡಿ ನಡೆಯಲಿದೆ. ಧರಣಿಯ ವೇಳೆ ಜಿಲ್ಲೆಯ ರೈತರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು ಎಂದರು
ರಾಜ್ಯದಲ್ಲಿ ಮುಖ್ಯಂಮತ್ರಿಗಳ ಆದೇಶದ ಮೇಲೆ ವಕ್ಫ್ ಅದಾಲತ್ ನಡೆಸಲಾಗುಯ್ತಿದೆ ಎಂದು ಸಚಿವ ಜಮೀರ ಅಹಮದ್ ಹೇಳಿದ್ದಾರೆ. ವಕ್ಫ್ ಗೆ ಅಧಿಕಾರ ಹಾಗೂ ಅದಾಲತ್ ನಡೆಸಲು ಅವಕಾಶ ನೀಡಿರುವುದರಿಂದ ಜನರು ಆತಂಕದಲ್ಲಿದ್ದಾರೆ. ಇಷ್ಟಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಮ್ಮೆಯೂ ಕ್ಷಮೆ ಕೇಳಿಲ್ಲ. ತಮ್ಮ ಮತಬ್ಯಾಂಕಿಗಾಗಿ ಏನನ್ನಾದರೂ ಮಾಡಲು ಹೊರಟಿರುವುದು ಖಂಡನೀಯ ಎಂದರು.