
ಕಾರವಾರ:
ಇಲ್ಲಿನ ಪಿಕಳೆ ರಸ್ತೆಯಲ್ಲಿರುವ ಚಾರುಮತಿ ವೆಲ್ ವುಮೆನ್ ಕ್ಲೀನಿಕ್ನಲ್ಲಿ ಸೋಮವಾರ ಶಾರ್ಟ್ ಸರ್ಕ್ಯೂಟ್ನಿಂದಾಗಿ ಅಗ್ನಿ ಅವಘಡ ನಡೆದಿದೆ.
ಇಲ್ಲಿನ ಡಾ. ವೈಜಯಂತಿ ಎಚ್. ಅವರಗೆ ಸೇರಿದ ಕ್ಲೀನಿಕ್ ಇದಾಗಿದ್ದು, ಮಧ್ಯಾಹ್ನ ಕ್ಲೀನಿಕ್ನಲ್ಲಿ ಯಾರು ಇರದ ವೇಳೆ ರೆಫ್ರಿಸಿರೇಟರ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಅವಘಡದಲ್ಲಿ ಫ್ರಿಡ್ಜ್ ಸೇರಿದಂತೆ ಇನ್ನೀತರ ಎಲೆಕ್ಟ್ರಾನಿಕ್ ಉಪಕರಣಗಳು ಬೆಂಕಿಗೆ ಹುತಿಯಾಗಿದೆ.
ಬೆಂಕಿಯಿಂದ ಕ್ಲೀನಿಕ್ನಲ್ಲಿ ದಟ್ಟ ಹೊಗೆ ಆವರಿಸಿತ್ತು. ಹಿನ್ನೆಲೆಯಲ್ಲಿ ಕ್ಲಿನಿಕ್ನ ಒಳಗಿನ ಕೋಣೆ ಸಂಪೂರ್ಣ ಹೊಗೆಯಿಂದ ತುಂಬಿಕೊಂಡಿದ್ದು ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಯು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಯಾದ ಉಲ್ಲಾಸ ನಾಗೇಕರ, ಟೋನಿ ಬಾರ್ಬೋಸ, ಅರುಣ ಬಸವರಾಜ ಉಳ್ಳಾಗಡ್ಡಿ, ಮಿಥುನ ಅಂಕೋಲಿಕರ, ವೀರಭದ್ರಯ್ಯ ಚಿಕ್ಕಮಟ್ಟ, ಸುನಿಲ ತಾಂಡೇಲ, ನರೇಶ ಖಾರವಿ, ಶ್ರೀಕಾಂತ ದೊಡ್ಡಮನಿ, ಭರತ ಕುಮಾರ ಹಾಗೂ ಕುಮಾರ ಇದ್ದರು.