
ದಾಂಡೇಲಿ:
ತಾಲೂಕಿನ ಆಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತೃಭೂಮಿ ಪ್ರತಿಷ್ಠಾನ ನೇಶನ್ ಫಸ್ಟ್ ಸಂಘಟನೆಯಿಂದ ಸ್ವಸ್ಥ ಭಾರತ ಸಧೃಡ ಭಾರತ ಅಂಗವಾಗಿ ಮಕ್ಕಳಿಗೆ ಆಟ ಆಡಿಸುವ ಮೂಲಕ ಮಕ್ಕಳ ದಿನಾಚರಣೆ ಆಚರಿಸಲಾಯಿತು.ಶಾಲಾ ಮಕ್ಕಳಿಗೆ ಹಳೆ ಕಾಲದ ಆಟ ತಿಳಿಸಿ ಅದರ ಆನಂದ ಪಡೆಯಲು ಅನುವು ಮಾಡಲಾಯಿತು.ಕಾರ್ಯಕ್ರಮದಲ್ಲಿ ಶಾಲೆಯ ಒಟ್ಟು 54 ಮಕ್ಕಳು ಭಾಗವಹಿಸಿದ್ದರು.ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೆ ಉಡುಗೊರೆ ಹಾಗೂ ಸಿಹಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು
ರಾಮಪ್ಪ ಸಿದರಿ ,ಶಾಲಾ ಶಿಕ್ಷಕಿಯರು ಮಾತೃಭೂಮಿ ಪ್ರತಿಷ್ಠಾನ ಸಂಘಟನೆಯ ಪ್ರಶಾಂತ್ ಕುಲಕರ್ಣಿ ,ರಾಹುಲ ಎಸ್ ಬನಸೋಡೆ, ಸಂದೀಪ್ ಗಾಂವ್ಕರ್, ವಿಠ್ಠಲ ವಾಟ್ಲೆಕರ್ ,ಪ್ರಶಾಂತ್ ನಾಯ್ಕ,ಬಸವರಾಜ ಕಟಗಿ,ಸುನಿಲ ,ನಾಗರಾಜ,ದರ್ಶನ ಪಾಲ್ಗೊಂಡಿದ್ದರು