
ದಾಂಡೇಲಿ :
ಭಾರತದ ಅತಿದೊಡ್ಡ ಮರುಭೂಮಿ ಕರ್ನಾಟಕದಲ್ಲಿ ಸಿದ್ದವಾಗುತ್ತಿದೆ. ಬೀದರ, ಗುಲ್ಬರ್ಗಾ, ಬಿಜಾಪುರ, ಚಿತ್ರದುರ್ಗ ಮತ್ತು ಉತ್ತರ ಕರ್ನಾಟಕದ ಬಹುಪಾಲು ಭೂಮಿ ಹವಾಮಾನ ವೈಪರಿತ್ಯದ ಮತ್ತು ರಸಾಯನಿಕಗಳ ಬಳಕೆಯಿಂದ ಮರುಭೂಮಿಯಾಗಿ ಪರಿವರ್ತನೆಯಾಗಲಿದೆ ಎಂದು ಪರಿಸರ ತಜ್ಞ ನಾಗೇಶ ಹೆಗಡೆ ಅಭಿಪ್ರಾಯ ಪಟ್ಟರು.
ಅವರು ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕ ಸುಸ್ಥಿರ ನಾಳೆಗಳು ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಜೋಗದ ಸಿರಿ ಬೆಳಕಿನಲ್ಲಿ ಸುಮಾರು ೩೫ ಸಾವಿರ ಕುಟುಂಬಗಳು ಒಕ್ಕಲೆದ್ದಿದ್ದು, ಇಂದಿಗೂ ಸಂತ್ರಸ್ಥರಿಗೆ ಬದುಕು ಕಟ್ಟಿಕೊಡಲಾಗಿಲ್ಲ. ಸಹ್ಯಾದ್ರಿ ಲೋಹದ ಅದಿರನ್ನು ಸಂಪೂರ್ಣವಾಗಿ ಲೂಟಿ ಮಾಡಲಾಗುತ್ತಿದೆ. ಶ್ರೀಗಂಧದ ಮರಗಳು ಎಳವೆಯಲ್ಲಿಯೇ ಕದಿಯಲ್ಪಟ್ಟು ಆಸ್ಟೆçÃಲಿಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಯುವಜನಾಂಗ ಜಾಗೃತಗೊಂಡು ಪರಿಸರವನ್ನು ರಕ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದರು. ಡಾ. ರುದ್ರೇಶ ಮೇಟಿಯವರು ಕನ್ನಡ ಅಧ್ಯಯನ ಮತ್ತು ಉದ್ಯೋಗಾವಕಾಶಗಳು ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಕನ್ನಡ ಅಧ್ಯಯನದಿಂದ ಅಪಾರ ಉದೋಗಾವಕಾಶಗಳಿದ್ದು, ಆ ಕುರಿತು ಸಾರ್ವಜನಿಕರಲ್ಲಿ ತಪ್ಪು ತಿಳುವಳಿಕೆ ಮೂಡಿದೆ. ಎಸ್.ಡಿ.ಸಿ ಎಫ್.ಡಿ.ಸಿ ಪಿ.ಡಿ.ಓ ಮೊದಲಾದ ಪರೀಕ್ಷೆಗಳಿಗೆ ಕನ್ನಡ ಅಧ್ಯಯವನೇ ಬುನಾದಿಯಾಗಿದೆ. ಇತ್ತೀಚಿಗೆ ಕರ್ನಾಟಕದಿಂದ ಐ.ಎ.ಎಸ್ ಪಾಸಾಗುವ ಬಹುಪಾಲು ಅಭ್ಯರ್ಥಿಗಳು ಕನ್ನಡ ಐಚ್ಚಿಕ ವಿಷಯವನ್ನು ಆಯ್ಕೆ ಮಾಡಿಕೊಂಡವರೆ ಆಗಿರುತ್ತಾರೆ ಎಂದು ಅಭಿಪ್ರಾಯ ಪಟ್ಟರು. ಪ್ರಾಂಶುಪಾಲರು ಡಾ. ಎಂ.ಡಿ ಒಕ್ಕುಂದ ಅಧ್ಯಕ್ಷತೆ ವಹಿಸಿದ್ದರು. ಡಾ. ವಿನಯಾ ಜಿ. ನಾಯಕ ಸ್ವಾಗತಿಸಿದರು. ಪದ್ಮಾ ಅನಸ್ಕರ ಹಾಗೂ ಉಮೇಶಗೌಡ ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಉಷಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕು. ವರ್ಷಾ ಹಾಗೂ ಸಂಗಡಿಗರು ಜಾನಪದ ಮತ್ತು ದೇಶಭಕ್ತಿ ಗೀತೆಗಳನ್ನು ಹಾಡಿದರು.