
ಹಳಿಯಾಳ:
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ವೀಟಾ, ಖಾನಾಪುರ ಹಾಗೂ ಅಟವಾಡಿ ತಾಲೂಕುಗಳನ್ನು ಒಳಗೊಂಡ ವಿಧಾನಸಭಾ ಕ್ಷೇತ್ರದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಬಣದ ಶಿವಸೇನೆಯ ಅಭ್ಯರ್ಥಿ ಸುಹಾಸ ಅದುಆಸಅನಿಲ್ ಬಾಬರ್ ಅವರು 78177 ಮಅದತಗಳಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕರ್ನಾಟಕದ ಹಳಿಯಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸುನೀಲ ಹೆಗಡೆಯವರು ಚುನಾವಣೆ ಕ್ಷೇತ್ರದ ಉಸ್ತುವಾರಿಯನ್ನು ವಹಿಸಿದ್ದರು ಕಳೆದ 30 ದಿನಗಳ ಕಾಲ ನಿರಂತರವಾಗಿ ಅಭ್ಯರ್ಥಿ ಹಾಗೂ ಮೈತ್ರಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಹಗಲಿರುಳು ಶ್ರಮಿಸಿ ಇಂದಿನ ದಿನವನ್ನು ಅದ್ದೂರಿಯಾಗಿ ಸಂಭ್ರಮಿಸಲು ಅಲ್ಲಿನ ಸ್ಥಳೀಯ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಇಲ್ಲಿನ ಸ್ಥಳಿಯ ಮತದಾರರಿಗೆ ಕೇಂದ್ರ ಹಾಗೂ ಮಹಾರಾಷ್ಟ್ರ ರಾಜ್ಯ ಸರ್ಕಾರದ ಜನಪರ ಆಡಳಿತ, ಅಭಿವೃದ್ಧಿ ಕಾರ್ಯಗಳು, ಯೋಜನೆ ಹಾಗೂ ಪ್ರಣಾಳಿಕೆಗಳನ್ನು ಜನರಿಗೆ ತಿಳಿಸಿ ನಮ್ಮ ಗೆಲುವಿಗೆ ಕಾರಣರಾಗಿದ್ದೀರಿ ಎಂದು ಅವರಿಗೆ ದೂರವಾಣಿ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಮಾಜಿ ಶಾಸಕರಾದ ಸುನೀಲ ಹೆಗಡೆಯವರು ಇ ಹಿಂದೆ ಗೋವಾ ರಾಜ್ಯದ ಕಾನಕೋನ ವಿಧಾನಸಭಾ ಚುನಾವಣೆ ಉಸ್ತುವಾರಿಯಾಗಿ ನೇಮಕಗೊಂಡಾಗ ಅಲ್ಲಿನ ಅಭ್ಯರ್ಥಿ ಈಗಿನ ಗೋವಾ ಸಭಾಧ್ಯಕ್ಷರಾದ ಶ್ರೀ ರಮೇಶ ತಾವಡ್ಕರ ಅವರು ವಿಜಯ ಸಾಧಿಸಿದ್ದು ಈಗ ಇದು ಎರಡನೇ ಗೆಲುವಾಗಿದೆ