
ಮುಂಡಗೋಡ:
ಪಟ್ಟಣದ ಶಿವಾಜು ವೃತ್ತದ ಬಳಿ ಹಣ ನೀಡಲು ನಿರಾಕರಿಸಿದರು ಎನ್ನುವ ಕಾರಣಕ್ಕೆ ಮಂಗಳಮುಖಿಯರು ಅಂಗಡಿ ಮಾಲೀಕ ಹಾಗೂ ಆತನ ಮಗುವಿನ ಮೇಲೆ ಹಲ್ಲೆ ನಡೆಸಿ, ಅಂಗಡಿಗೂ ಹಾನಿಯುಂಟುಮಾಡಿದ ಘಟನೆ ಪಟ್ಟಣದ ಶಿವಾಜಿ ವೃತ್ತದ ಬಳಿ ನಡೆದಿದೆ.
ಇಲ್ಲಿನ ರಾಜೇಶ ಹಲ್ಲೆಗೊಳಗಾದ ವ್ಯಕ್ತಿ. ಪಟ್ಟಣಕ್ಕೆ ಹುಬ್ಬಳ್ಳಿಯಿಂದ ಬಂದಿದ್ದ ಆರು ಮಂದಿ ಮಂಗಳಮುಖಿಯರ ತಂಡ ಶಿವಾಜಿ ಸರ್ಕಲ್ ಬಳಿ ಭಿಕ್ಷೆ ಬೇಡಿಕೊಂಡು ಬಂದಿದೆ. ಈ ವೇಳೆ ಅಂಗಡಿ ಎದುರು ಬಂದ ಮಂಗಳಮುಖಿಯೋರ್ವರು ನೂರು ರೂಪಾಯಿ ಕೊಡುವಂತೆ ಮಾಲೀಕ ರಾಜೇಶ್ಗೆ ಬೇಡಿಕೆಯಿಟ್ಟಿದ್ದಾರೆ. ಈ ವೇಳೆ ರಾಜೇಶ ಹಣ ಕೊಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಮಂಗಳಮುಖಿಯರು ಮಾಲೀಕನ ಮೇಲೆ ಹಲ್ಲೆ ನಡೆಸಿದ್ದು, ಅಂಗಡಿಯ ಗಾಜುಗಳನ್ನು ಒಡೆದು, ತಿಂಡಿ ಬಾಕ್ಸ್ಗಳನ್ನು ಚೆಲ್ಲಾಡಿ ಗಲಾಟೆ ಮಾಡಿದ್ದಾರೆ.
ಈ ವೇಳೆ ಅಂಗಡಿ ಬಳಿ ಆಟವಾಗಿಕೊಂಡಿದ್ದ ಚಿಕ್ಕ ಮಗುವನ್ನೂ ಬಿಡದ ಮಂಗಳಮುಖಿಯರು ಮಗುವಿನ ಮೇಲೂ ಹಲ್ಲೆ ನಡೆಸಿದ್ದು, ಮಗುವಿನ ತಲೆಗೆ ಗಾಯವಾಗಿ ರಕ್ತ ಸ್ರಾವವಾಗಿದೆ. ಮಂಗಳಮುಖಿಯರ ರಂಪಾಟ, ಗಲಾಟೆ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ಠಾಣೆಗೂ ತೆರಳಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಳಿಕ ಮಂಗಳಮುಖಿಯರನ್ನು ವಶಕ್ಕೆ ಪಡೆದು ಕ್ರಮ ಜರುಗಿಸಿದ್ದಾರೆ.