
ಕಾರವಾರ:
ನಿಷೇಧದ ನಡುವೆಯೂ ಕಾರವಾರ ಭಾನುವಾರದ ಸಂತೆಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದು ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ತರಕಾರಿ, ಹಣ್ಣು ಹಾಗೂ ದಿನಸಿ ವ್ಯಪಾರಿಗಳಿಂದ ಒಟ್ಟೂ 19 ಕೆ.ಜಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ವಶಕ್ಕೆ ಪಡೆಯಲಾಯಿತು. ಅಲ್ಲದೇ ವ್ಯಾಪಾರಿಗಳಿಂದ ಒಟ್ಟೂ 4,600 ರೂ. ದಂಡ ವಿಧಿಸಿದ್ದಾರೆ.