
ಮುರಡೇಶ್ವರ:
ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಿತ್ರನಟ ಡಾಲಿ ಧನಂಜಯ ಅವರು ಭಾನುವಾರ ಮುರಡೇಶ್ವರದ ನೇತ್ರಾಣಿ ದ್ವೀಪದ ಬಳಿ ಸ್ಕೂಬಾ ಡೈವಿಂಗ್ ಮಾಡಿದರು.
ಮುರ್ಡೇಶ್ವರದ ಅಕ್ವಾ ರೈಡ್ ಕಂಪನಿಯಿಂದ ತಮ್ಮ ಸ್ನೇಹಿತರೊಂದಿಗೆ ಮುರ್ಡೇಶ್ವರ ಕಡಲತೀರದಿಂದ ತೆರಳಿದ ಅವರು ಸಮುದ್ರದ ವಾತಾವರಣಕ್ಕೆ ಆಕರ್ಶಿತರಾದರು. ಬಳಿಕ ನೇತ್ರಾಣಿಯ ಸಮೀಪದ ಆಳ ಸಮುದ್ರದಲ್ಲಿ ಸ್ಕೂಬಾ ಮಾಡಿದರು. ಅಪರೂಪದ ಮೀನುಗಳನ್ನ, ಹವಳದ ಬಂಡೆಗಳನ್ನ ಕಂಡು ಖುಷಿ ಪಟ್ಟರು. ಸುಮಾರು 45 ನಿಮಿಷಗಳ ಕಾಲ ನೀರಿನಾಳದಲ್ಲಿ ಕಾಲ ಕಳೆದರು. ಪ್ರವಾಸಿಗರ ಕಾಳಜಿ ತೆಗೆದುಕೊಂಡು ಸ್ಕೂಬಾ ಮಾಡಿಸುತ್ತಿರುವ ಅಕ್ವಾ ರೈಡ್ ಕಂಪನಿ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳಿಗೆ ಧನ್ಯವಾದ ಸಲ್ಲಿಸಿದರು.