
ಕಾರವಾರ:
ಬುಧವಾರ (ನ.27) ರಂದು ಕರಾವಳಿ ತಾಲೂಕಿನ ಬಹಿತೇಕ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕುಮಟಾ, ಹೊನ್ನಾವರ ಹಾಗೂ ಮುರಡೇಶ್ವರ ವ್ಯಾಪ್ತಿಯ 110 ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ ನಿರ್ವಹಣೆ ಕೆಲಸ ಇರುವ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟಿಯ ವರೆಗೆ ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕಾರವಾರ ತಾಲೂಕಿನ ಶೇಜವಾಡ-ಹಣಕೋಣ 33ಕೆವಿ, ಮತ್ತು 33ಕೆವಿ ಶೇಜವಾಡ-ಕದ್ರಾ ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಸದಾಶಿವಗಡ, ಮಾಜಾಳಿ, ಮುಡಗೇರಿ, ಅಸ್ನೋಟಿ ಹಾಗೂ ಹಳಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿ ಹಾಗೂ ಕದ್ರಾ 33/11 ಕೆವಿ ವಿದ್ಯುತ್ ಪೂರೈಕೆಯಾಗುವ ಕೊಡಸಳ್ಳಿ, ಕುರ್ನಿಪೇಟ್, ಲಕ್ಷ್ಮಿ ನಗರ, ವಿರ್ಜೆ, ಹರ್ಟುಗಾ, ಕದ್ರಾ ಗ್ರಾಮೀಣ ಮತ್ತು ಗೋಟೆಗಾಳಿ ಕುಡಿಯುವ ನೀರಿನ ಸ್ಥಾವರಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕೆ.ಪಿ.ಟಿ.ಸಿ.ಎಲ್ ಕುಮಟಾ 110 ಕೆ.ವಿ ಉಪ ಕೇಂದ್ರದಲ್ಲಿ ಬಸ್ಬಾರ್ ನಿರ್ವಹಣೆ ಕಾಮಗಾರಿ ಇರುವುದರಿಂದ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ ಗೋಕರ್ಣ, ಮಾದನಗೇರಿ, ತದಡಿ, ಬಂಕಿಕೊಡ್ಲ, ಬಿಜ್ಜುರು, ಓಂ ಬೀಚ್, ಗಂಗಾವಳಿ ಫೀಡರಿನ ಎಲ್ಲಾ ಭಾಗಗಳಲ್ಲ್ಲಿ ಹಾಗೂ 33/11 ಕೆ.ವಿ ಮರಾಕಲ ಉಪಕೇಂದ್ರದ 11 ಕೆ.ವಿ ಮಾರ್ಗದಲ್ಲಿ ಸಂತೆಗುಳಿ, ಕಲ್ಲಬ್ಬೆ, ಹೊದ್ಕೆ-ಶಿರೂರು, ಸಂತೇಗುಳಿ, ಚಂದಾವರ ಹಾಗೂ ಮೂರುರು ಫೀಡರಿನ ಹಾಗೂ ಮತ್ತು ನಗರ ಶಾಖೆಯ ನಗರ ಪ್ರದೇಶ ಫೀಡರಗಳಾದ ಚಿತ್ರಗಿ, ಇಂಡಸ್ಟ್ರೀಸ್, ಕುಮಟಾ ಟೌನ ಗ್ರಾಮೀಣ ಶಾಖೆಯ ಹೆಗಡೆ, ಕತಗಾಲ, ಧಾರೇಶ್ವರ, ವಾಲಗಳ್ಳಿ, ಭಾಡಾ, ಮಿರ್ಜಾನ ಮಾಸೂರು, 11 ಕೆ.ವಿ ಮಾರ್ಗದ ಎಲ್ಲಾ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.