
ಹಳಿಯಾಳ:
ಹಳಿಯಾಳ – ಕಲಘಟಗಿ ರಾಜ್ಯ ಹೆದ್ದಾರಿಯ ಮುರಾರ್ಜಿ ದೇಸಾಯಿ ಶಾಲೆಯ ಮುಂಭಾಗದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಉರುಳಿ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.
ಕಳೆದ ಕೆಲ ದಿನಗಳಿಂದ ಕಬ್ಬಿನ ಕಟಾವು ಹಾಗೂ ಕಾರ್ಖಾನೆಗಳಿಗೆ ಸಾಗಣೆ ಭರದಿಂದ ಸಾಗಿದೆ. ಹದಗೆಟ್ಟ ರಸ್ತೆಯಲ್ಲಿ ಎರಡು ಟ್ರಾಲಿ ತುಂಬಿದ ಕಬ್ಬಿನ ಟ್ರ್ಯಾಕ್ಟರ್ಗಳು ಚಲಿಸುತ್ತಿವೆ. ಪ್ರತಿನಿತ್ಯವೂ ಈ ಭಾಗದಲ್ಲಿ ಟ್ರ್ಯಾಕ್ಟರ್ ಉರುಳುವುದು ಸಾಮಾನ್ಯವಾಗಿದೆ.
ಟ್ರ್ಯಾಕ್ಟರ್ ಚಾಲನೆ ಮಾಡುವ ಚಾಲಕರು ಈ ರಸ್ತೆಗಳಲ್ಲಿ ಸಂಚರಿಸುವಾಗ ಜಾಗೂರಕತೆ ವಹಿಸುವುದು ಅಗತ್ಯವಾಗಿದೆ. ಟ್ರ್ಯಾಕ್ಟರ್ನಲ್ಲಿ ಟೇಪ್ರೆಕಾರ್ಡ್ರ ಹಚ್ಚಿಕೊಂಡು ಚಲಿಸುತ್ತಿರುವುದಕ್ಕೂ ಪೊಲೀಸರು ನಿರ್ಬಂಧ ಹೇರಿದ್ದು ಅಲ್ಲದೇ ಇಕ್ಕಟ್ಟಾದ ಹಾಗೂ ಹದಗೆಟ್ಟ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ತಪ್ಪಿದ ಬಾರಿ ಅನಾಹುತ: ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಸುಮಾರು 250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಶಾಲಾ ಅವಧಿಯ ನಂತರ ಟ್ರ್ಯಾಕ್ಟರ್ ಪಲ್ಟಿ ಯಾಗಿದ್ದು ಇದರಿಂದ ಬಾರಿ ಅನಾಹುತ ಒಂದು ತಪ್ಪಿದಂತಾಗಿದೆ.