
ದಾಂಡೇಲಿ:
ನಗರದ ಹಾರ್ನ್ ಬಿಲ್ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟ ಹಾಗೂ
ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ
ಇವರ ಸಹಯೋಗದಲ್ಲಿ ಡಾ. ಭೀಮರಾವ್ ಅಂಬೇಡ್ಕರ ಅವರ ಸಂಘರ್ಷಿತರಾಗಿ, ಸಂಘಟಿತರಾಗಿ ಚಾರಿತ್ರಿಕ ಘೋಷಣೆಗಳ ಶತಮಾನೋತ್ಸವ ಜಾಗೃತಿ ಅಭಿಯಾನ ಹಾಗೂ ಸಂವಿಧಾನ ದಿನದ ಅಂಗವಾಗಿ
ದಲಿತ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕಗಳ ಉದ್ಘಾಟನಾ ಸಮಾರಂಭವನ್ನು ಕೋಲಾರದ ಆದಿಮ ಫೌಂಡೇಶನ್ ಸ್ಥಾಪಕರಾದ ಕೋಟಿಗಾನಹಳ್ಳಿ ರಾಮಯ್ಯ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ ಶ್ರಮದಿಂದ ಗಳಿಸಿಕೊಂಡ ಜ್ಞಾನದಿಂದ ಶ್ರೇಷ್ಠ ಸಾಹಿತ್ಯ ಸೃಷ್ಟಿಸಿ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಪ್ರತಿಪಾದಿಸಿದ್ದಾರೆ. ಹೆಣ್ಣುಮಕ್ಕಳು ಗ್ರಂಥಾಲಯದ ಮುಂದೆ ಸಾಲುಗಟ್ಟಿ ನಿಂತಾಗ ದೇಶದ ನಿಜವಾದ ಪ್ರಗತಿ ಎಚ್ಚರಿಸಿದ ಮಹಾನ್ ಚೇತನದ ಬರೆಹಗಳು ಇನ್ನೂ ಹೆಚ್ಚು ಜನರಿಗೆ ತಲುಪಿಸಿ ವಿಸ್ತೃತವಾಗಿ ಅಧ್ಯಯವಾಗಬೇಕು ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿವೃತ್ತ ಜಂಟಿ ನಿರ್ದೇಶಕರ ಸದಾಶಿವ ಮರ್ಜಿ ದಿಕ್ಸೂಚಿ ಭಾಷಣ ಮಾಡಿದರು.
ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಭೀಮಾಶಂಕರ ಅಜನಾಳ ದಲಿತ ಸಾಹಿತ್ಯ ಪರಿಷತ್ತಿನ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ಹೇಳಿದರು.
ನಾರಾಯಣ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು,ಶ್ರಿಮಂತ ಮದರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀಕಾಂತ ಚಲವಾದಿ ಸಂವಿಧಾನ ಪ್ರತಿಜ್ಞಾ ವಿಧಿ ಭೋದಿಸಿದರು. ಬಾಬಾ ಜರ್ರಿ ವಂದಿಸಿದರು.
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟ ದಾಂಡೇಲಿ ಘಟಕದ ಪದಾಧಿಕಾರಿಗಳ ಆಯ್ಕೆ ನಡೆಯಿತು.