
ಜೋಯಿಡಾ –
ಜೋಯಿಡಾ ತಾಲೂಕಿನ ನಂದಿಗದ್ದೆಯಲ್ಲಿ ಪ್ರೇರಣಾ ಸಂಸ್ಥೆಯ 15 ರ ಸಂಭ್ರಮ ಕಾರ್ಯಕ್ರಮದಲ್ಲಿ ಯಕ್ಷಗಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದವು.
ಕಾರ್ಯಕ್ರಮವನ್ನು ಯರಮುಖ ಸೋಮೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಮಂಜುನಾಥ ಭಾಗ್ವತ್ ಉದ್ಘಾಟಿಸಿ ಮಾತನಾಡಿ ಪ್ರೇರಣಾ ಸಂಸ್ಥೆ ತಾಲೂಕಿನ ಜನರಿಗೆ ಪ್ರೇರಣೆಯಾಗಿದೆ, ಉತ್ತಮವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಮಾದರಿಯಾಗಿದೆ ಎಂದರು.
ತಾಲೂಕು ಕ.ಸಾ.ಪ ಅಧ್ಯಕ್ಷ ಪಾಂಡುರಂಗ ಪಟಗಾರ ಮಾತನಾಡಿ ತಾಲೂಕಿನಲ್ಲಿ ಯಕ್ಷಗಾನ ಕಲೆ ಉಳಿಯಲು ಗುಂದ ಭಾಗದ ಜನರ ಸಹಕಾರ ಸಾಕಷ್ಟಿದೆ, ಯಕ್ಷಗಾನ ಕನ್ನಡದ ಕಲೆಯಾಗಿದೆ ಎಂದು ಪ್ರೇರಣಾ ಸಂಸ್ಥೆ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಯಕ್ಷ ಮಾಣಿಕ್ಯ ಚಿಂತನಾ ಹೆಗಡೆ ಮಾಳಕೋಡ ,ಹಾಗೂ ಹಿರಿಯ ಯಕ್ಷಗಾನ ಕಲಾವಿದ ಗೋಪಾಲ್ ಆಚಾರ್ಯ ತೀರ್ಥಹಳ್ಳಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನಂದಿಗದ್ದೆ ಗ್ರಾ.ಪಂ ಉಪಾಧ್ಯಕ್ಷೆ ದಾಕ್ಷಾಯಿಣಿ ದಾನಶೂರ,ಸದಸ್ಯರಾದ ಧವಳೋ ಸಾವರಕರ, ಶೋಭಾ ಎಲ್ಲೆಕರ ,ಶಿಕ್ಷಕರ ಸಂಘಧ ಅಧ್ಯಕ್ಷ ಯಶವಂತ ನಾಯ್ಕ ರಕ್ಷಣಾ ವೇದಿಕೆಯ ಲೀಲಾ ಮಾದರ,ಪತ್ರಕರ್ತರಾದ ಸಂದೇಶ ದೇಸಾಯಿ ,ಗಿರೀಶ್ ಪಾಟೀಲ್ ಇತರರು ಉಪಸ್ಥಿತರಿದ್ದರು.ನಂತರ ಮಹೇಂದ್ರ ಶಪಥ ಯಕ್ಷಗಾನ ನಡೆಯಿತು.