
ದಾಂಡೇಲಿ :
ನಗರದ ಅಂಬೇಡ್ಕರ್ ಅಭಿಮಾನಿ ಸೇನೆ ಭೀಮ ಧ್ವನಿ ಸಂಘಟನೆಯ ಆಶ್ರಯದಡಿ ದಾಂಡೇಲಿ ನಗರದಲ್ಲಿ ಶುಕ್ರವಾರ ಸಂಜೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯ್ತು.
ನಗರದ ಬಿಸಿಎಂ ವಸತಿ ನಿಲಯದಿಂದ ನಗರ ಸಭೆಯ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯವರೆಗೆ ಮೇಣದ ದೀಪದೊಂದಿಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು. ಆನಂತರ ಅಂಬೇಡ್ಕರ್ ಅವರ ಪ್ರತಿಮೆಗೆ ಗೌರವ ನಮನವನ್ನು ಸಲ್ಲಿಸಲಾಯಿತು.
ಅಂಬೇಡ್ಕರ್ ಅಭಿಮಾನಿ ಸೇನೆ ಭೀಮ ದ್ವನಿ ಸಂಘಟನೆಯ ಅಧ್ಯಕ್ಷರಾದ ರವಿ ಮಾಲಕರಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುವ ಹೋರಾಟಗಾರ ಭೀಮುಧಿ ಬಾದುಲಿ, ಬಿಸಿಎಂ ವಸತಿ ನಿಲಯದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಮತ್ತು ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.