
ಅಂಕೋಲಾ :
ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದಾಗಿ ತಾಲೂಕಿನ ಹಿಲ್ಲೂರಿನಲ್ಲಿ ನಡೆದ ಕಳ್ಳತನ ಪ್ರಕರಣವನ್ನು 24 ಗಂಟೆಯಲ್ಲಿ ಭೇದಿಸಿ ಆರೋಪಿಗಳನ್ನು ಬಂಧಿಸಿ, ದೇವರ ಮೂರ್ತಿಗಳನ್ನು ವಶ ಪಡಿಸಿಕೊಂಡ ಘಟನೆ ನಡೆದಿದೆ.
ಕದ್ರಾ ಕೆಪಿಸಿ ನೌಕರ ಶ್ರೀನಿವಾಸ ತಂದೆ ಗುರುಸ್ವಾಮಿ, ದಾರವಾಡ ನಿವಾಸಿ ಹಾಲಿ ಚಿತ್ತಾಕುಲ ನಿವಾಸಿ ಅಶೋಕ ಹನುಮಂತಪ್ಪ ಬಂಡಿವಡ್ಡರ, ಕದ್ರಾದ ಮೌಲಾಲಿ ಮಹ್ಮದ ಅಜಾದ ಸೈಯದ, ಬೆಂಗಳೂರಿನ ನಿವಾಸಿ ಹಾಲಿ ಕದ್ರಾ ನಿವಾಸಿ ಮುಬಾರಕ ಇಬ್ರಾಹಿಂ ಶೇಖ್, ಬೆಂಗಳೂರು ವೈಟ್ ಪೀಲ್ಡನ ಹಾಲಿ ಕದ್ರಾ ನಿವಾಸಿ ಎ.ಎಸ್. ಶೇಖ್ ಶರೀಫ್ ಎ.ಎಸ್. ಅಬ್ದುಲ್ ರಹೀಮ್, ಫುರಖಾನ ಮೆಹಬೂಬಖಾನ ಬಂಧಿತ ಆರೋಪಿಗಳು. ಇವರಿಂದ ಒಟ್ಟು 16 ಹಿತ್ತಾಳೆಯ ನಮೂನೆಯ ದೇವರ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದು ಜೊತೆಗೆ ಇನ್ನೋವಾ ಕ್ರೀಸ್ಟಾ, ಮಾರುತಿ ಸುಜುಕಿ ಸ್ವೀಪ್ಟ್, ಮಹೀಂದ್ರಾ ಹೈಲೋ, ಡಿಯೋ ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಡಿಸೆಂಬರ 09 ರ ನಸುಕಿನ 02-30 ಗಂಟೆಯ ನಡುವಿನ ಅವದಿಯಲ್ಲಿ ಹಿಲ್ಲೂರಿನ ವಿಠಲ್ ತಂದೆ ಬಾಂದಿ ಅವರ ಮನೆಯಲ್ಲಿ ಮನೆ ಜನರು ಮನೆಯಲ್ಲಿ ಮಲಗಿರುವ ಸಂದರ್ಭದಲ್ಲಿ ಕಳ್ಳರು ಮನೆಯ ಒಳಗೆ ಪ್ರವೇಶಿಸಿ, ದೇವರ ಕೋಣೆಯ ಬೀಗ ಮುರಿದು, ದೇವರ ಮೂರ್ತಿ ಸೇರಿದಂತೆ 1,30000 ಮೌಲ್ಯದ ಹಲವು ವಸ್ತುಗಳನ್ನು ಕದ್ದೊಯ್ದಿದ್ದರು.