
ಜೋಯಿಡಾ:
ತಾಲೂಕಿನ ಪಣಸೋಲಿ ವಲಯ ಅರಣ್ಯ ಇಲಾಖೆ,ಪ್ರಧಾನಿ ಗ್ರಾಮ ಪಂಚಾಯತ, ನಂದಿಗದ್ಧೆ ಗ್ರಾಮ ಪಂಚಾಯತ ಇವುಗಳ ಸಹಯೋಗದಲ್ಲಿ ಪಣಸೋಲಿ ವಲಯ ವ್ಯಾಪ್ತಿಯ ಕಾನೇರಿ ಸೇತುವೆಯಿಂದ ಪೊಟೋಲಿ ಕ್ರಾಸ್ ವರೆಗೆ ರಸ್ತೆಯ ಅಕ್ಕ ಪಕ್ಕದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ಕಸವನ್ನು ತೆಗೆಯಲಾಯಿತು. ಸ್ವಚ್ಛತೆಯ ಕಾರ್ಯಕ್ರಮದಲ್ಲಿ ಪಣಸೋಲಿ ವಲಯ ಅರಣ್ಯ ಅಧಿಕಾರಿಗಳಾದ ರವಿಕಿರಣ ಸಂಪಗಾವಿರವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಶಾಂತಾರಾಮ,ಅಮಿತ,ಪರಿಸರ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ,ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್,ಕಾವಲು ಗಾರರಾದ ಉಮೇಶ ವೇಳಿಪ,ಸಂತೋಷ ಪಿ,ಪ್ರಸಾದ ದೇಸಾಯಿ, ಅಚ್ಯುತ ನಾಯ್ಕ,ಪ್ರಸನ್ನ ದೇಸಾಯಿ,ದಯಾನಂದ, ವಿಭಾಕರ ದೇಸಾಯಿ, ರಾಮಚಂದ್ರ ಬಾಂದೇಕರ ಇನ್ನಿತರರು ಭಾಗವಹಿಸಿದ್ದರು.
ಸ್ವಚ್ಚವಾಹಿನಿ ವಾಹನದ ಸೇವೆಯನ್ನು ಒದಗಿಸಿದ ಪ್ರಧಾನಿ ಹಾಗೂ ನಂದಿಗದ್ದೆ ಗ್ರಾಮ ಪಂಚಾಯತದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರುಗಳಿಗೆ ಹಾಗೂ ಅಧಿಕಾರಿ ವರ್ಗದವರಿಗೆ ಅರಣ್ಯ ಇಲಾಖೆವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.