
ದಾಂಡೇಲಿ :
ನಗರದ ಶೇಖರ್ ಆಸ್ಪತ್ರೆಯಲ್ಲಿ ನಾಳೆ ಡಿ.20 ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಚಿಕ್ಕ ಮಕ್ಕಳಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಖ್ಯಾತ ಹಾಗೂ ನುರಿತ ಚಿಕ್ಕ ಮಕ್ಕಳ ನರರೋಗ ತಜ್ಞರಾದ ಡಾ. ರಾಘವೇಂದ್ರ ಸ್ವಾಮಿ ಅಮೋಘಿಮಠ ಅವರು ಭಾಗವಹಿಸಲಿದ್ದಾರೆ. ಈ ಶಿಬಿರದಲ್ಲಿ ಚಿಕ್ಕ ಮಕ್ಕಳ ತಲೆನೋವು, ಚಿಕ್ಕ ಮಕ್ಕಳಿಗೆ ಪಿಟ್ಸ್, ಚಿಕ್ಕ ಮಕ್ಕಳಿಗೆ ಪಾರ್ಶವಾಯು, ನರಮಂಡಲಗಳಲ್ಲಿ ತೊಂದರೆಗಳು, ಏಕಾಗ್ರತೆ ಕೊರತೆಯ ಹೈಪರ್ ಆಕ್ಟಿವಿಟಿ ಡಿಸಾರ್ಡರ್, ಸ್ವಲೀನತೆ – ನರಕ್ಕೆ ಸಂಬಂಧಪಟ್ಟ ಡಿಸಾರ್ಡರ್, ನರ ಚಯಾಪಚಯ ಅಸ್ವಸ್ಥತೆಗಳು ಹಾಗೂ ನರವೈಜ್ಞಾನಿಕ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಯಲಿದೆ. ಈ ಶಿಬಿರದಲ್ಲಿ ಇಇಜಿ ಲಭ್ಯವಿದೆ. ಶಿಬಿರದಲ್ಲಿ ಭಾಗವಹಿಸುವ ಚಿಕ್ಕ ಮಕ್ಕಳಿಗೆ ಆಟದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಲಿದೆ.
ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಶೇಖರ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಶೇಖರ್ ಹಂಚಿನಾಳಮಠ ಅವರು ವಿನಂತಿಸಿದ್ದಾರೆ.