
ಯಲ್ಲಾಪುರ:
ತಾಲ್ಲೂಕು ಪಂಚಾಯತ್ನ ಸಭಾಂಗಣದಲ್ಲಿ ಬುಧವಾರ ಜರುಗಿದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ನಿರ್ದೇಶನದಂತೆ ಡಿಸೆಂಬರ್ 12 ರಂದು ತಾಲ್ಲೂಕಿನಾದ್ಯಂತ ಹಮ್ಮಿಕೊಂಡ ತೆರಿಗೆ ವಸುಲಾತಿ ಅಭಿಯಾನದಲ್ಲಿ ಶೇ 100ರಷ್ಟು ತೆರಿಗೆ ಸಂಗ್ರಹಿಸಿದ ಹಿತ್ಲಳ್ಳಿ, ಆನಗೋಡ ಮತ್ತು ಒಂದು ಲಕ್ಷಕ್ಕಿಂತ ಹೆಚ್ಚು ತೆರೆಗೆ ಸಂಗ್ರಹಿಸಿ ಉತ್ತಮ ಪ್ರಗತಿ ಸಾಧಿಸಿದ ಕಣ್ಣಿಗೇರಿ, ಕಿರವತ್ತಿ, ಮಂಚಿಕೇರಿ, ಮದನೂರ, ಇಡಗುಂದಿ, ಮಾವಿನಮನೆ, ಹಾಸಣಗಿ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್ಗಳು, ಸಿಬ್ಬಂದಿಗೆ ಹಾಗೂ ಜಿಲ್ಲಾ ಪಂಚಾಯತ್ನಿಂದ ನೀಡುವ ಜಿಲ್ಲಾ ಮಟ್ಟದ ನವೆಂಬರ್ ತಿಂಗಳ “ಪಿಡಿಒ ಆಪ್ ದಿ ಮಂತ್” ಪ್ರಶಸ್ತಿ ಪುರಸ್ಕೃತ ಕುಂದರಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿ ಪಟಗಾರಗೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಧನವಾಡಕರ, ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ ಆಗೇರ, ತಾಲ್ಲೂಕಾ ಯೋಜನಾಧಿಕಾರಿ ರಾಘವ ಸ್ಮರಣಿಕೆ, ಪ್ರಮಾಣ ಪತ್ರ ವಿತರಿಸುವ ಮೂಲಕ ಸನ್ಮಾನಿಸಿ ಅಭಿನಂದಿಸಿದರು.
ತಾಪಂ ವ್ಯವಸ್ಥಾಪಕ ರಾಮದಾಸ ನಾಯ್ಕ್, ವಿಷಯ ನಿರ್ವಾಹಕ ಪರಶುರಾಮ ಹುಲಗೂರ, ಗಣಪತಿ ಭಾಗ್ವತ ಎಲ್ಲ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್ಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಐಇಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಡಿಇಒ ಗಳು, ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.