
ಹಳಿಯಾಳ:
ಅಪರಾಧಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು, ಅಪರಾಧಗಳು ಆಗದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲು ಅಪರಾಧ ತಡೆ ಮಾಸಾಚರಣೆ ನಿಮಿತ್ತ ಹಳಿಯಾಳ ಠಾಣೆಯ ಪಿ.ಎಸ.ಐ ವಿನೋದ ರೆಡ್ಡಿ ಅವರು ಜನಪರ ಕಾಳಜಿ ವಹಿಸಿ ತಾಲೂಕಿನ ಹಲವೆಡೆ ಸಂಚಾರ ನಿಯಮ ಉಲ್ಲಂಘಿಸಿದ ಇನ್ಸೂರೆನ್ಸ್_ ಇಲ್ಲದ ಒಟ್ಟು 43 ವಾಹನಗಳನ್ನು ಹಿಡಿದು ಇನ್ಷೂರೆನ್ಸ್ ಕಟ್ಟಿದ ಮೇಲೆ 24 ವಾಹನಗಳನ್ನು ಬಿಟ್ಟು ಕಳಸಲಾಗಿದ್ದು, ದಾಖಲಾತಿ ತೋರಿಸದ ಒಟ್ಟು 19 ವಾಹನಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಸಂಚಾರ ನಿಯಮಗಳು, ಹೆಲ್ಮಟ್ ಪ್ರಾಮುಖ್ಯತೆ, ತ್ರಿಬಲ್ ರೈಡಿಂಗ್ ಅಪಾಯ ಮತ್ತು ವಾಹನದ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ವಾಹನ ಸವಾರರಿಗೆ ತಿಳಿಸಿದ್ದಾರೆ ಇನ್ಷೂರೆನ್ಸ್ ಇಲ್ಲದೆ ವಾಹನ ಚಲಾಯಿಸಿ ಅಪಘಾತವಾದರೆ ಯಾವುದೆ ಪರಿಹಾರ ಸಿಗುವುದಿಲ್ಲ ಆದ ಕಾರಣವಾಹನ ಸವಾರರು ಇನ್ಷೂರೆನ್ಸನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದು ತಾಲೂಕಿನ ಹಲವೆಡೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.ತಪಾಸಣೆ ವೆಳೆ ಇನ್ಷೂರನ್ಸ ಇಲ್ಲದ ವಾಹನಗಳನ್ನು ಪಿ.ಎಸ.ಐ ವಿನೋದ ರೆಡ್ಡಿಯವರು ಮೂತುವರ್ಜಿವಹಿಸಿ ವಾಹನ ಸವಾರರು ಇನ್ಷೂರನ್ಸ್ ಮಾಡಿಸಿದ ಮೇಲೆ ವಾಹನಗಳನ್ನು ಬಿಟ್ಟು ಕಳಿಸಿದ್ದಾರೆ. ಇವರ ಈ ಕಾರ್ಯಕ್ಕೆ ಪಟ್ಟನದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಕೇವಲ ಪೋಲಿಸರಿಂದ ಅಪರಾಧ ತಡೆ ಸಾಧ್ಯವಿಲ್ಲ ಇದಕ್ಕೆ ಸಾರ್ವಜನಿಕರ ಸಹಕಾರವು ಮುಖ್ಯ ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಅಪರಾಧ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದು ಮಾಧ್ಯಮದ ಮೂಲಕ ಜನರಿಗೆ ಮಾಹಿತಿ ನೀಡಿದ್ದಾರೆ.