
ಕಾರವಾರ:
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವೈ.ಕೆ.ಉಮೇಶ ಅವರು ಮೂಲತ ಬಂದರು ಇಲಾಖೆಯ ಅಧಿಕಾರಿಯಾಗಿದ್ದು ಸಮಾಜ ಕಲ್ಯಾಣ ಇಲಾಖೆ /ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಯೋಜನೆಗಳು ಮತ್ತು SC/ST ಜನರ ಕುಂದು ಕೊರತೆಗಳನ್ನು ಬಗೆಹರಿಸುವ ಯಾವುದೇ ಮಾಹಿತಿ ಮತ್ತು ಮನಸು ಸಮಯ ಇವರಿಗೆ ಇಲ್ಲ. ಹೀಗಾಗಿ ಕೂಡಲೇ ಇವರನ್ನು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ ಪ್ರಭಾರಿ ಹುದ್ದೆಯಿಂದ ಮತ್ತು ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣಾ ಇಲಾಖೆಯ ಅಧಿಕಾರಿ ಪ್ರಭಾರಿ ಹುದ್ದೆಯಿಂದ ತೆರೆವುಗೊಳಿಸಿ ಇಲಾಖೆಯ ಅಧಿಕಾರಿಗಳನ್ನೇ ನೇಮಕ ಮಾಡುವಂತೆ ಮುಂಡಗೋಡದ ದಿ.ಎಸ್.ಎಸ್ ಮುಖಂಡ ಫಕ್ಕೀರಪ್ಪ ಆಗ್ರಹಿಸಿದ್ದಾರೆ.
ಅವರಿಗೆ ನಿಶ್ವಾರ್ತಭಾವನೆ ಇಲ್ಲ. SC/ST ಜನರ ಮೇಲೆ ದೌರ್ಜನ್ಯಗಳು ನಡೆದಾಗ ಕಾನೂನಾತ್ಮಕ ಕ್ರಮಗಳನ್ನು ಜರೂಗಿಸಿ ಸೂಕ್ತ ರಕ್ಷಣೆ ಕೊಡಿಸುವ ಹಾಗೂ ಪರಿಹಾರ ಧನ ಕೊಡುವ ಬಗ್ಗೆ ಹೆಚ್ಚಿನ ಅನುಭವ ಮತ್ತು ಮಾಹಿತಿ ಕೊರತೆಯಿಂದ SC/ST ಜನರ ಕೆಲಸಕಾರ್ಯಗಳು ಹಾಗೂ ಸರ್ಕಾರಿ ಸೇವೆಗಳು ವಿಳಂಬವಾಗಿ ಸರ್ಕಾರದ ಸೌಲಭ್ಯಗಳಿಂದ ಸಮುದಾಯದವರು ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.