
ದಾಂಡೇಲಿ: ಯೇಸು ಕ್ರಿಸ್ತನ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ನಗರದಲ್ಲಿ ಕ್ರೈಸ್ತರು ಬುಧವಾರ ಸಡಗರದಿಂದ ಆಚರಿಸಿದರು. ಮನೆಗಳಲ್ಲಿಯೂ ಪುಟ್ಟ ಗೋದಲಿ ನಿರ್ಮಿಸಿ ದೀಪಗಳ ಅಲಂಕಾರ ಮಾಡುವ ಮೂಲಕ ಸಂಭ್ರಮಿಸಿದರು.
ನಗರದ ಬರ್ಚಿ ರಸ್ತೆಯ ಸೇಂಟ್ ಜೋಸೆಫ್ ವೊರ್ಕರ್ಸ ಚರ್ಚ ದೀಪಾಲಂಕಾರದೊಂದಿಗೆ ಝಗಮಗಿಸಿತು. ಮಂಗಳವಾರ ತಡರಾತ್ರಿ ಯೇಸುಕ್ರಿಸ್ತನ ಜನನದ ವಿಶೇಷ ಗೋದಲಿ ಪೂಜೆ ನೆರವೇರುವುದರೊಂದಿಗೆ ಹಬ್ಬ ಕಳೆಗಟ್ಟಿತು. ಚರ್ಚನಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ನಂತರ ಕೇಕ್ ವಿತರಿಸಲಾಯಿತು.
ದಾಂಡೇಲಿ ವುಡಲ್ಯಾಂಡ ಫರ್ನಿಚರ್ಸನ ಮಾಲಕರಾದ ಜೊನ್ಸನ್ ರೊಡರ್ಗಿಸ್ ಅವರ ಮನೆಯಲ್ಲಿ ನಿರ್ಮಿಸಲಾದ ಗೋದಲಿಯು ನೋಡುಗರ ಕಣ್ಮನ ಸೆಳೆಯಿತು.
ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕೇಕ್ ಮಾರಾಟದ ಪ್ರಮಾಣ ಹೆಚ್ಚಿತ್ತು.